*’ರಾವಣ ರಾಜ್ಯದಲ್ಲಿ ನವದಂಪತಿ’ಗಳಾದ ಯುವ ಪ್ರತಿಭೆ ಅರ್ಜುನ್ ಸೂರ್ಯ ಹಾಗೂ ನಿಧಿ ಹೆಗ್ಡೆ
*ನಿರ್ಮಾಪಕರಾದ ಬಡವ ರಾಸ್ಕಲ್ ಡೈರೆಕ್ಟರ್… ರಾವಣ ರಾಜ್ಯದಲ್ಲಿ ನವದಂಪತಿಗಳಿಗೆ ಸಾಥ್ ಕೊಟ್ಟ ಶಂಕರ್ ಗುರು*
‘ಬಡವರ ಮನೆ ಮಕ್ಕಳು ಬೆಳಿಬೇಕು ಕಣ್ರಯ್ಯ’ ಎಂಬ ನಾಣ್ಮುಡಿ ಸೃಷ್ಟಿಕರ್ತ ಈಗ ಒಂದು ಹೆಜ್ಜೆ ಮುಂದೆ ಹೋಗಿ ಚಿತ್ರ ನಿರ್ಮಾಣಕ್ಕೆ ಇಳಿದಿದ್ದಾರೆ. ಬಡವ ರಾಸ್ಕಲ್ ಸಿನಿಮಾ ಸೂತ್ರಧಾರ ಶಂಕರ್ ಗುರು ಈಗ ನಿರ್ಮಾಪಕರಾಗಿದ್ದಾರೆ. ಯುವ ಪ್ರತಿಭೆಗಳ ರಾವಣ ರಾಜ್ಯದಲ್ಲಿ ನವದಂಪತಿಗಳು ಎಂಬ ಕನಸಿಗೆ ಶಂಕರ್ ಗುರು ಸಾಥ್ ಕೊಟ್ಟಿದ್ದಾರೆ. ಅಂದಹಾಗೇ ಈ ಚಿತ್ರದ ಪ್ರಮುಖ ಪಿಲ್ಲರ್ ಧೀರಜ್ ಎಂವಿ ಹಾಗೂ ವರುಣ್ ಗುರುರಾಜ್. ಇವರಿಬ್ಬರು ಗ್ರೀನ್ ಚಿಲ್ಲೀಸ್ ಸ್ಟುಡಿಯೋಸ್ ಹಾಗೂ ಧೀರಜ್ ಎಂವಿ ಫಿಲ್ಮಂಸ್ ನಡಿ ರಾವಣ ರಾಜ್ಯದಲ್ಲಿ ನವದಂಪತಿಗಳು ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ಧೀರಜ್ ಹಾಗೂ ವರುಣ್ ಗುರುರಾಜ್ ಸಾಹಸಕ್ಕೆ ಶಂಕರ್ ಗುರು ನಿರ್ಮಾಪರಾಗಿ ಬೆಂಬಲ ನೀಡಿದ್ದಾರೆ.
ರಾವಣ ರಾಜ್ಯದಲ್ಲಿ ನವದಂಪತಿಗಳು ಸಿನಿಮಾಗೆ ಯುವ ಪ್ರತಿಭೆ ರಂಗ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಗುರು ಪ್ರಸಾದ್ ಗರಡಿಯಲ್ಲಿ ಕೋ ಡೈರೆಕ್ಟರ್ ಆಗಿ ಹಾಗೂ ಸುನಿಲ್ ಕುಮಾರ್ ದೇಸಾಯಿ ಅವರ ಜೊತೆ ನಿರ್ದೇಶನದ ಪಟು ಕಲಿತುಕೊಂಡಿರುವ ರಂಗ ಈ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗಿ ಗುರುತಿಸಿಕೊಳ್ಳುತ್ತಿದ್ದಾರೆ. ಸದ್ದಿಲ್ಲದೇ ಶೂಟಿಂಗ್ ಮುಗಿಸಿ ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ಅದರ ಭಾಗವಾಗಿ ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ ಅನಾವರಣ ಮಾಡುವ ಮೂಲಕ ಪ್ರಚಾರ ಕಾರ್ಯಕ್ಕೆ ಚಾಲನೆ ಕೊಡಲಾಗಿದೆ. ಯುವ ಪ್ರತಿಭೆ ಅರುಣ್ ಸೂರ್ಯ ಹಾಗೂ ಡೊಳ್ಳು ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿರುವ ನಿಧಿ ಹೆಗ್ಡೆ ಜೋಡಿಯಾಗಿ ನಟಿಸಿದ್ದಾರೆ.
ಅಭಿನಂದನ್ ಕಶ್ಯಪ್ ಮ್ಯೂಸಿಕ್ ಹಾಗೂ ಸೌಂಡ್ ಡಿಸೈನ್, ವೀರೇಶ್ ಎನ್ ಟಿಎ ಕ್ಯಾಮೆರಾ ಹಿಡಿದಿದ್ದು, ವಸಂತ ಸಂಕಲನ ಚಿತ್ರಕ್ಕಿದೆ. ಡಾರ್ಕ್ ಸೋಷಿಯಲ್ ಸರ್ಟಿಕಲ್ ಡ್ರಾಮಾ ಕಂಟೆಂಟ್ ಹೊಂದಿದ್ದು, ಹೊಸದಾಗಿ ಮದುವೆಯಾದ ನವದಂಪತಿಗಳು ಸಾಮಾಜಿಕ ಕಟ್ಟುಪಾಡುಗಳಿಗೆ ಸಿಲುಕುವ ಕಥೆಯೇ ಚಿತ್ರದ ತಿರುಳು. ರಾವಣ ರಾಜ್ಯದಲ್ಲಿ ನವದಂಪತಿಗಳು ಸಿನಿಮಾವನ್ನು ಕನ್ನಡ ಫಿಲ್ಮಿ ಕ್ಲಬ್ ಸಿನಿಮಾ ಬಿಡುಗಡೆ ಕಾರ್ಯಕ್ಕೆ ಸಾಥ್ ಕೊಡಲಿದೆ.
Deprecated: preg_replace(): Passing null to parameter #3 ($subject) of type array|string is deprecated in /home/u452565381/domains/kannadabeatz.com/public_html/wp-includes/kses.php on line 1805
Deprecated: preg_replace(): Passing null to parameter #3 ($subject) of type array|string is deprecated in /home/u452565381/domains/kannadabeatz.com/public_html/wp-includes/kses.php on line 1805