HomeNewsಕಾಶಿಯ ನಾಗಸಾಧುವಿನಿಂದ ರಂಗಸಮುದ್ರ ಚಿತ್ರದ "ಕೈಲಾಸ"ಸಾಂಗ್ ಬಿಡುಗಡೆ

ಕಾಶಿಯ ನಾಗಸಾಧುವಿನಿಂದ ರಂಗಸಮುದ್ರ ಚಿತ್ರದ “ಕೈಲಾಸ”ಸಾಂಗ್ ಬಿಡುಗಡೆ

ಹಲವು ರೀತಿಯ ವೈಶಿಷ್ಟ್ಯಗಳಿಗೆ ಪದೆ ಪದೆ ಕಾರಣವಾಗುತ್ತಿರುವ ರಂಗಸಮುದ್ರ ಸಿನಿಮಾ ಈಗ ಮತ್ತೊಂದು ವಿಶೇಷವಾದ ರೀತಿಯಲ್ಲಿ ಸಿನಿ ಪ್ರಮೋಷನ್ ಮಾಡಿದೆ.

ದೊಡ್ಡ ದೊಡ್ಡ ಕಾರ್ಯಕ್ರಮ ಮಾಡಿ ಆಡೀಯೋ ಬಿಡುಗಡೆ ಮಾಡುವುದು ಈಗಿನ ಸಿನಿಮಾ ತಂಡಗಳ ಟ್ರೆಂಡ್. ಆದರೆ ಅದನ್ನು ಹೊರತು ಪಡಿಸಿ ಹೀಗೂ ಬಿಡುಗಡೆ ಮಾಡಬಹುದು ಎಂದು ಪವಿತ್ರ ಕ್ಷೇತ್ರ “ಕಾಶಿ”ಗೆ ಸಿನಿತಂಡ ತೆರಳಿ ಸಾಂಗ್ ಗೆ ಹೊಂದಿಕೊಂಡಂತಿರುವ ಒಬ್ಬ ನಾಗಸಾಧುಗಳ ಬಳಿ ಬಿಡುಗಡೆ ಮಾಡಿಸಿರುವುದು ಈ ಸಿನಿಮಾ ತಂಡದ ಟ್ಯಾಲೆಂಟ್ ಎಷ್ಟಿದೆ ಇನ್ನು ಸಿನಿಮಾ ಹೇಗಿರಬಹುದು ಎಂಬುದು ತಿಳಿಯುತ್ತಿದೆ.

ದೇಶದ ಅಧ್ಬುತ ಗಾಯಕ ಕೈಲಾಶ್ ಕೇರ್ ಕನ್ನಡದಿಂದ ಹಿಂದಿ ಗೆ ಸ್ವತಃ ತಾವೇ ಬರೆದುಕೊಂಡು ಬಹಳ ಇಷ್ಟ ಪಟ್ಟು ಉತ್ಸಾಹದಿಂದ ಹಾಡಿರುವುದು ಈ ಲಿರಿಕಲ್ ಸಾಂಗ್ ನ ವಿಡೀಯೊದಲ್ಲಿ ಕಾಣಬಹುದಾಗಿದೆ.

ಕನ್ನಡ ಸಿನಿರಂಗದಲ್ಲಿ ತನ್ನದೆ ಆದ ಛಾಪು ಮೂಡಿಸಿಕೊಂಡಿರುವ ರಂಗಾಯಣ ರಘು ಈ ಹಿಂದೆ ಕಾಮಿಡಿ ನಟನೆಯ ಮೂಲಕ ಕನ್ನಡಿಗರ ಮನಸ್ಸು ಗೆದ್ದಿದ್ದರು.

ಈ ಚಿತ್ರದ ಮುಖ್ಯ ಭೂಮಿಕೆಯಲ್ಲಿ ಸಂಪೂರ್ಣವಾಗಿ ಕಾಣಸಿಗುವ ರಂಗಾಯಣ ರಘು ಅವರು ವಿಭಿನ್ನ ಹಾಗು ವಿಶಿಷ್ಟ ಪಾತ್ರದಲ್ಲಿ ಸಿನಿರಸಿಕರ ಮುಂದೆ ಬರಲಿದ್ದಾರೆ ಎಂದು ಹೇಳಿದೆ ಚಿತ್ರತಂಡ.

ಕನ್ನಡ ಸಿನಿಮಾದಲ್ಲಿ ಮೊದಲ ಬಾರಿಗೆ ಸಂಪೂರ್ಣ ಭಂಡಾರವನ್ನೇ ಉಪಯೋಗಿಸಿ ಚಿತ್ರೀಕರಿಸಿದ ಮೊದಲ ಸಾಂಗ್ ಇದಾಗಿದ್ದು, ಸಾಂಗ್ ಅತ್ಯಂತ ಕಲರ್ ಪುಲ್ ಆಗಿ ಮೂಡಿಬಂದಿದೆ.

ನಮ್ಮ ಸಾಂಗ್ ಗೆ ಬೇಕಾದ ಸ್ಥಳ ಹಾಗು ಹೊಂದಿಕೊಳ್ಳುವ ಜನ ಬೇಕಿತ್ತು, ಹಾಗಾಗಿ ಮಹಾರಾಷ್ಟ್ರ ದ ಸಾಂಗ್ಲಿ ಜಿಲ್ಲೆಯ ಹುಲಿಜಯಂತಿ ಊರನ್ನು ಆಯ್ಕೆ ಮಾಡಿಕೊಂಡೆವು. ಅಲ್ಲಿನ ಮಾಳಿಂಗರಾಯ ಸ್ವಾಮಿ ಜಾತ್ರಗೆ ಸರಿಸುಮಾರು 15 ಲಕ್ಷ ಜನರು ಸೇರುತ್ತಾರೆ. ನಮಗೆ ಅದೇ ಬೇಕಾಗಿದ್ದರಿಂದ 4 ತಿಂಗಳು ಕಾಯ್ದು ಆ ಜನಗಳ ಮದ್ಯೆ ಕಷ್ಟಪಟ್ಟು ಚಿತ್ರೀಕರಿಸಿದ್ದೇವೆ. ಕಷ್ಟಪಡಲು ಕಾರಣ ಸಿನಿಮಾ ವೀಕ್ಷಕರಿಗೆ ಇಷ್ಟವಾಗಬೇಕು ಎಂಬುದು ನಮ್ಮ ಉದ್ದೇಶ/ಆಶಯ ಎನ್ನುತ್ತಾರೆ ನಿರ್ದೇಶಕ ರಾಜಕುಮಾರ್ ಅಸ್ಕಿ ಹಾಗು ಕೋರಿಯೋಗ್ರಫರ್ ಬಿ. ಧನಂಜಯ್.

ಸಿನಿಮಾ ಕಥೆ ಕೇಳಿದ ನಿರ್ಮಾಪಕ ಬಜೆಟ್ ಇಷ್ಟೇ ಎಂದು ನಿರ್ದಿಷ್ಟವಾದ ಮೊತ್ತವೊಂದನ್ನು ಹೇಳಿದ್ದಾರೆ. ಆದರೆ ಮುಂದಿನ ದಿನಗಳಲ್ಲಿ ಚಿತ್ರದ ಮೇಕಿಂಗ್ ಮತ್ತು ಈ ಗೀತೆಯನ್ನು ಗಮನಿಸಿದ ನಿರ್ಮಾಪಕ ನಿರ್ದೇಶಕನಿಗೆ ಹೇಳಿದ್ದಿಷ್ಟೇ. ನಿನ್ನ ಕನಸಿನಂತೆ ಚಿತ್ರೀಕರಿಸು ಯಾವುದಕ್ಕೂ ಕಾಂಪ್ರಮೈಸ್ ಆಗುವುದು ಬೇಡಾ ಎಂದರಂತೆ. ಕೇವಲ ಈ ಹಾಡೊಂದನ್ನು ಚಿತ್ರೀಕರಿಸಲು, ವೆಚ್ಚವಾಗಿರುವುದು ಎಷ್ಟೆಂದರೆ, ಈ ಸಿನಿಮಾದ ಹಿಂದಿನ ಬಜೆಟ್ ನ ಅರ್ಧದಷ್ಟು ಎಂದರೆ ಸಾಂಗ್ ನೋಡಿದ ಮೇಲೆ ಮಾಧ್ಯಮ ಮಿತ್ರರು ಹಾಗು ಪ್ರೇಕ್ಷಕರಿಗೆ ತಿಳಿಯುತ್ತದೆ ಎನ್ನುತ್ತಾರೆ ನಿರ್ದೇಶಕ ರಾಜಕುಮಾರ್ ಅಸ್ಕಿ..

ಇನ್ನು ರೈತ ಕುಟುಂಬದಿಂದ ಬಂದು ರಾಜಕೀಯ/ಸಾಮಾಜಿಕ ಕ್ಷೇತ್ರದಲ್ಲಿ ತನ್ನದೆ ಆದ ಹೆಸರು ಮಾಡಿರುವ ಹೊಯ್ಸಳ ಕೊಣನೂರು ಅವರು ಈ ಚಿತ್ರದ ನಿರ್ಮಾಪಕರು. ಹೊಸಬರನ್ನೆ ಒಳಗೊಂಡಿರುವ ಈ ಚಿತ್ರತಂಡಕ್ಕೆ ಬೆನ್ನೆಲುಬಾಗಿದ್ದಾರೆ.

ರಂಗಸಮುದ್ರ ಚಿತ್ರದಲ್ಲಿ 5 ಹಾಡುಗಳಿದ್ದು ಕೈಲಾಶ್ ಕೇರ್, ಬಾಹುಬಲಿ ಖ್ಯಾತಿಯ ಎಮ್ ಎಮ್ ಕೀರವಾಣಿ, ವಿಜಯ್ ಪ್ರಕಾಶ್, ಸಂಚಿತ್ ಹೆಗ್ಡೆ ಹಾಗು ದೇಸಿ ಮೋಹನ್ ಧ್ವನಿಯಾಗಿದ್ದಾರೆ.

ಈ 5 ಗೀತೆಗಳಿಗೂ ಸಾಹಿತ್ಯ ಬರೆದಿರುವ ವಾಗೀಶ್ ಚನ್ನಗಿರಿ ತನ್ನ ಮೊದಲ ಸಾಹಿತ್ಯಕ್ಕೆ ಅತ್ಯುನ್ನತ ಗಾಯಕರು ಧ್ವನಿಗೂಡಿರುವುದು ನನಗೊಂದು ಗರ್ವ ಮತ್ತು ಹೆಮ್ಮೆ ಎನ್ನುತ್ತಾರೆ.

ದೇಸಿಮೋಹನ್ ಈ ಸಿನಿಮಾಕ್ಕೆ ಸಂಗೀತ ನಿರ್ದೇಶನ ಮಾಡಿದ್ದಾರೆ. ಬಿ ಧನಂಜಯ್ ಕೋರಿಯೋಗ್ರಫಿ
ಆರ್.ಗಿರಿ ಅವರ ಛಾಯಾಗ್ರಾಹಣ, ಕೆ.ಜಿ.ಎಫ್ ಖ್ಯಾತಿಯ ಶ್ರೀಕಾಂತ್ ಅವರ ಸಂಕಲನ ಈ ಚಿತ್ರಕ್ಕಿದೆ.

ಮುಖ್ಯಭೂಮಿಕೆಯಲ್ಲಿ ರಂಗಾಯಣರಘು, ಸಂಪತ್ ರಾಜ್, ಕೆವಿಆರ್, ದಿವ್ಯಾಗೌಡ, ಮೋಹನ್ ಜುನೇಜಾ, ಗುರುರಾಜ್ ಹೊಸಕೋಟೆ, ಮಿಮಿಕ್ರಿ ಗೋಪಿ, ಉಗ್ರಂ ಮಂಜು, ಸದಾನಂದ, ಮೂಗ್ ಸುರೇಶ್, ಶಂಕರ್ ದಾಸ್ ಬಳ್ಳಾರಿ, ಮಹೇಂದ್ರ, ಸ್ಕಂದ ತೇಜಸ್ ಇನ್ನೂ ಮುಂತಾದವರಿದ್ದಾರೆ.

ರಂಗಸಮುದ್ರ ಹೊಸ ತಂಡವಾದರು ಸ್ಯಾಂಡಲ್ವುಡ್ ನಲ್ಲಿ ಸದ್ದು ಮಾಡುವುದರಲ್ಲಿ ಯಾವುದೇ ಅನುಮಾನವಿಲ್ಲಾ ಎಂದು ಗಾಂಧಿನಗರದಲ್ಲಿ ಕೇಳಿಬರುತ್ತಿರುವ ಗುಸುಗುಸು ಸುದ್ದಿ..

Must Read

spot_img

Deprecated: preg_replace(): Passing null to parameter #3 ($subject) of type array|string is deprecated in /home/u452565381/domains/kannadabeatz.com/public_html/wp-includes/kses.php on line 1805

Deprecated: preg_replace(): Passing null to parameter #3 ($subject) of type array|string is deprecated in /home/u452565381/domains/kannadabeatz.com/public_html/wp-includes/kses.php on line 1805
Share via
Copy link
Powered by Social Snap