ನಿನ್ನೆ ರಾಕಿಂಗ್ ಸ್ಟಾರ್ ಯಶ್ ಅವರ ಹುಟ್ಟುಹಬ್ಬ. ನೆಚ್ಚಿನ ಸ್ಟಾರ್ ನಟನ ಹುಟ್ಟುಹಬ್ಬವನ್ನು ಆಚರಿಸಲು ರಾಜ್ಯಾದ್ಯಂತ ಅಭಿಮಾನಿಗಳು ಹಲವಾರು ರೀತಿಯ ತಯಾರಿಗಳನ್ನು ಮಾಡಿಕೊಂಡಿದ್ದರು. ಯಶ್ ಅವರನ್ನು ಭೇಟಿ ಮಾಡಿ ಅವರ ಬಳಿ ಕೇಕ್ ಕಟ್ ಮಾಡಿಸಿ ಹಲವಾರು ರೀತಿಯ ಉಡುಗೊರೆಗಳನ್ನು ನೀಡಬೇಕೆಂದು ಯಶ್ ಅಭಿಮಾನಿಗಳು ರೆಡಿ ಆಗಿದ್ದರು.
ಆದರೆ ಇತ್ತೀಚೆಗಷ್ಟೇ ಫೇಸ್ ಬುಕ್ ನಲ್ಲಿ ವಿಡಿಯೋ ಒಂದನ್ನು ಅಪ್ಲೋಡ್ ಮಾಡುವ ಮೂಲಕ ರಾಕಿಂಗ್ ಸ್ಟಾರ್ ಯಶ್ ಅವರು ಅವರ ಅಭಿಮಾನಿಗಳಿಗೆ ಬೇಸರದ ಸುದ್ದಿಯೊಂದನ್ನು ನೀಡಿದ್ದರು. ಹೌದು ಯಶ್ ಅವರು ಫೇಸ್ ಬುಕ್ ನಲ್ಲಿ ವಿಡಿಯೋ ಒಂದನ್ನು ಅಪ್ಲೋಡ್ ಮಾಡುವುದರ ಮೂಲಕ ಅದರಲ್ಲಿ ಈ ವರ್ಷ ನನ್ನ ಹುಟ್ಟುಹಬ್ಬವನ್ನು ಆಚರಿಸಬೇಡಿ ನಾನು ಸಹ ಆಚರಿಸಿಕೊಳ್ಳಲು ಇಚ್ಛೆ ಪಡುವುದಿಲ್ಲ ಎಂದು ತಿಳಿಸಿದರು.
ಹೌದು ರಾಕಿಂಗ್ ಸ್ಟಾರ್ ಯಶ್ ಅವರು ಈ ವರ್ಷ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುವುದಿಲ್ಲ ಎಂದು ಮೊದಲೇ ತಿಳಿಸಿದ್ದರು ಖ್ಯಾತ ನಟ ಅಂಬರೀಶ್ ಅವರು ವಿಧಿವಶರಾದ ಕಾರಣ ಆ ನೋವಿನಲ್ಲಿರುವ ಯಶ್ ಅವರು ಈ ವರ್ಷ ಯಾವುದೇ ರೀತಿಯ ಸಂಭ್ರಮಾಚರಣೆ ಬೇಡ ನಾನು ಯಾವ ಅಭಿಮಾನಿಗಳಿಗೂ ಸಹ ಸಿಗುವುದಿಲ್ಲ ಎಂದು ತಿಳಿಸಿದರು.
ಇಷ್ಟೆಲ್ಲಾ ಹೇಳಿದರೂ ಸಹ ಕೆಲ ಅಭಿಮಾನಿಗಳು ಯಶ್ ಅವರ ಮನೆ ಮುಂದೆ ಬಂದು ಯಶ್ ಅವರನ್ನು ನಾವು ನೋಡಲೇಬೇಕು ಬರ್ತ್ಡೇ ವಿಶ್ ಮಾಡಲೇಬೇಕು ಎಂದು ಪಟ್ಟು ತೊಟ್ಟು ಕುಳಿತಿದ್ದರು. ಹೀಗೆಯೇ ನೆಲಮಂಗಲ ನಿವಾಸಿಯಾದ ರವಿ ಎಂಬಾತನು ಸಹ ನಿನ್ನೆ ರಾಕಿಂಗ್ ಸ್ಟಾರ್ ಯಶ್ ಅವರನ್ನು ನೋಡಲು ಮನೆ ಮುಂದೆ ಬಂದು ಕುಳಿತಿದ್ದ. ಆದರೆ ತುಂಬಾ ಹೊತ್ತು ಕಳೆದರೂ ಸಹಾ ರಾಕಿಂಗ್ಸ್ಟಾರ್ ಯಶ್ ಅವರು ಈ ದಿನ ನಿಮಗ್ಯಾರಿಗೂ ಸಿಗುವುದಿಲ್ಲ ಅಂಬರೀಶ್ ಅವರ ನಿಧನದಿಂದ ಅವರು ಈ ವರ್ಷ ಬರ್ತ್ ಡೇಯನ್ನು ಆಚರಿಸಿಕೊಳ್ಳುತ್ತಿಲ್ಲ ದಯವಿಟ್ಟು ಹೊರಡಿ ಎಂದು ಹೇಳಿದರೂ ಸಹ ಅವರ್ಯಾರೂ ತೆರಳಲಿಲ್ಲ.
ತುಂಬಾ ಹೊತ್ತು ಕಾದ ನಂತರ ಯಶ್ ಅವರು ಬರುವುದಿಲ್ಲ ಎಂದು ತಿಳಿದ ಮೇಲೆ ರವಿ ಪೆಟ್ರೋಲ್ ಸುರಿದುಕೊಂಡು ಬೆಂಕಿಯನ್ನು ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಇದೇ ವೇಳೆ ಅಲ್ಲಿ ನೆರೆದಿದ್ದ ಪೊಲೀಸರು ಮತ್ತು ಜನರು ಬೆಂಕಿಯನ್ನು ನಂದಿಸಿ ಆತನನ್ನು ತಕ್ಷಣ ವಿಕ್ಟೋರಿಯಾ ಆಸ್ಪತ್ರೆಗೆ ನೆನ್ನೆ ದಾಖಲಿಸಿದರು. ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ ನಂತರ ಆತನಿಗೆ ಚಿಕಿತ್ಸೆ ಕೊಡಲಾಗಿತ್ತು ಆದರೆ ಆತನ ದೇಹ ಬಹುತೇಕ ಸುಟ್ಟು ಹೋಗಿತ್ತು ಇಂದು ಚಿಕಿತ್ಸೆ ಫಲಕಾರಿಯಾಗದೆ ನಿಧನ ಹೊಂದಿದ್ದಾನೆ. https://twitter.com/nimmasuresh/status/1082846460645847040?s=19