ನಾಯಕನ ಹುಟ್ಟುಹಬ್ಬಕ್ಕೆ ಶೀರ್ಷಿಕೆ ಅನಾವರಣ ಮಾಡಿದ ಚಿತ್ರತಂಡ.
ಕನ್ನಡ ಚಿತ್ರರಂಗದಲ್ಲಿ ವಿಭಿನ್ನ ಕಥಾವಸ್ತುವುಳ್ಳ ಚಿತ್ರಗಳು ಹೆಚ್ಚುತ್ತಿದೆ. ಪ್ರೇಕ್ಷಕರಿಗೆ ಅದನ್ನು ಮೆಚ್ಚಿಕೊಳ್ಳುತ್ತಿದ್ದಾರೆ.
ಸೈಕೋ ಥ್ರಿಲ್ಲರ್ ಕಥಾಹಂದರವಿರುವ “ಮೇನಿಯಾ” ಸಿನ್ಸ್ 1999 ಚಿತ್ರ ಕೂಡ ವಿಭಿನ್ನ ಕಥಾವಸ್ತು ಹೊಂದಿರುವ ಚಿತ್ರ. ಜುಲೈನಲ್ಲಿ ಈ ಚಿತ್ರದ ಚಿತ್ರೀಕರಣ ಆರಂಭವಾಗಲಿದೆ. ಅದಕ್ಕೂ ಮುನ್ನ ನಾಯಕ ಸ್ವಸ್ತಿಕ್ ಆರ್ಯ ಅವರ ಹುಟ್ಟುಹಬ್ಬದ ಪ್ರಯುಕ್ತ ಚಿತ್ರತಂಡ ಶೀರ್ಷಿಕೆ ಅನಾವರಣ ಮಾಡಿದೆ.
ಮಧು.ಎಸ್ ಈ ಚಿತ್ರದ ನಿರ್ದೇಶಕರು.
ಲೂಸ್ ಮಾದ ಯೋಗಿ ಅಭಿನಯದ “ಲಂಕೆ” ಸೇರಿದಂತೆ ಕನ್ನಡದ ಕೆಲವು ಚಿತ್ರಗಳಿಗೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿರುವ ಮಧು ಎಸ್, ದೊರೆ – ಭಗವಾನ್ ಅವರ ಇನ್ಸ್ಟಿಟ್ಯೂಟ್ ನಲ್ಲಿ ನಿರ್ದೇಶನ ತರಭೇತಿ ಸಹ ಪಡೆದಿದ್ದಾರೆ. ಕೆಲವು ಕಿರುಚಿತ್ರಗಳನ್ನು ನಿರ್ದೇಶಿಸಿದ್ದಾರೆ.
ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆಯನ್ನು ಮಧು ಅವರೆ ಬರೆಯುತ್ತಿದ್ದಾರೆ. ಇದು ಮಧು ಅವರಿಗೆ ಚೊಚ್ಚಲ ನಿರ್ದೇಶನದ ಚಿತ್ರ.
ಸ್ಚಸ್ತಿಕ್ ಆರ್ಯ ಈ ಚಿತ್ರದ ನಾಯಕ. “ರಂಗನಾಯಕಿ” ಧಾರಾವಾಹಿಯಲ್ಲಿ ನಟಿಸುರುವ ಇವರು, ವಿಜಯ್ ಪ್ರಕಾಶ್ ಹಾಡಿರುವ “ಜಿಯಾ” ಆಲ್ಬಂ ನಲ್ಲೂ ಅಭಿನಯಿಸಿದ್ದಾರೆ. ಕನ್ನಡ ಹಾಗೂ ಹಿಂದಿ ಭಾಷೆಯಲ್ಲಿ ಈ ಆಲ್ಬಂ ಸಾಂಗ್ ಮೂಡಿ ಬಂದಿತ್ತು. ನೀನಾಸಂ ನಲ್ಲಿ ಅಭಿನಯಕ್ಕೆ ಬೇಕಾದ ತರಭೇತಿಯನ್ನು ಸ್ವಸ್ತಿಕ್ ಆರ್ಯ ಪಡೆಯುತ್ತಿದ್ದಾರೆ.
ಸ್ವಸ್ತಿಕ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ನಾಯಕ ಸ್ವಸ್ತಿಕ್ ಆರ್ಯ ಅವರು ಅರುಣ್ ಭಟ್ ಅವರೊಡಗೂಡಿ ಈ ಚಿತ್ರವನ್ನ ನಿರ್ಮಾಣ ಮಾಡುತ್ತಿದ್ದಾರೆ.
ಬೆಂಗಳೂರು- ಮಂಗಳೂರಿನಲ್ಲಿ ನಲವತ್ತು ದಿನಗಳ ಚಿತ್ರೀಕರಣ ನಡೆಯಲಿದೆ. ಎರಡು ಹಾಡುಗಳಿರುತ್ತದೆ. ವಿಶಾಲ್ ಕುಮಾರ್ ಗೌಡ ಛಾಯಾಗ್ರಾಹಕರಾಗಿ ಹಾಗೂ ಮಧು ತುಂಬಕೆರೆ ಸಂಕಲನಕಾರರಾಗಿ ಕಾರ್ಯ ನಿರ್ವಹಿಸಲಿದ್ದಾರೆ. ನಾಯಕಿ ಸೇರಿದಂತೆ ಉಳಿದ ತಾರಾಬಳಗದ ಆಯ್ಕೆ ನಡೆಯುತ್ತಿದೆ.