HomeNewsಮೇಘನರಾಜ್ ಅವರಿಗೆ ಪ್ರತಿಷ್ಠಿತ "FOG HERO" ಅವಾರ್ಡ್.

ಮೇಘನರಾಜ್ ಅವರಿಗೆ ಪ್ರತಿಷ್ಠಿತ “FOG HERO” ಅವಾರ್ಡ್.

ತಮ್ಮ ಉತ್ತಮ ನಟನೆಯ ಮೂಲಕ ಜನಪ್ರಿಯರಾಗಿರುವ ನಟಿ ಮೇಘನರಾಜ್ ಅವರಿಗೆ ಈ ಬಾರಿಯ ಪ್ರತಿಷ್ಠಿತ “FOG HERO” ಅವಾರ್ಡ್ ದೊರಕಿದೆ.

ಕ್ಯಾಲಿಫೋರ್ನಿಯಾದ ಸ್ಯಾನ್ ಫ್ರಾನ್ಸಿಸ್ಕೊದಲ್ಲಿ “ಫೆಡರೇಷನ್ ಆಫ್ ಇಂಡೋ ಅಮೆರಿಕನ್ಸ್ ಆಫ್ ನಾರ್ತೆನ್ ಕ್ಯಾಲಿಫೋರ್ನಿಯಾ” ಇವರು ಆಯೋಜಿಸುವ “ಫೆಸ್ಟಿವಲ್ ಆಫ್ ಗ್ಲೋಬ್”(FOG) ಸಮಾರಂಭ ಕಳೆದ ನಲವತ್ತು ವರ್ಷಗಳಿಂದ ಅದ್ದೂರಿಯಾಗಿ ನಡೆದುಕೊಂಡು ಬರುತ್ತಿದೆ. ಈ ಬಾರಿ ಆಗಸ್ಟ್‌ 19, 20 ಹಾಗೂ 21 ರಂದು ಈ ಸಮಾರಂಭ ನಡೆಯಲಿದೆ. ಮೂರು ದಿನಗಳ ಕಾಲ ನಡೆಯುವ ಈ ಸಮಾರಂಭಕ್ಕೆ ಅಲ್ಲಿ ನೆಲೆಸಿರುವ ಭಾರತೀಯರು, ಸ್ಥಳೀಯರು ಸೇರಿದಂತೆ ಲಕ್ಷಕ್ಕೂ ಅಧಿಕ ಜನ‌ರು ಬರುವ ನಿರೀಕ್ಷೆಯಿದೆ. ಅಲ್ಲಿನ ರಾಜಕೀಯ ಪ್ರಮುಖರು, ಗಣ್ಯರು ಸಹ ಸಮಾರಂಭಕ್ಕೆ ಆಗಮಿಸುತ್ತಾರೆ. ಪ್ರತಿವರ್ಷ ಭಾರತದ ಸ್ವಾತಂತ್ರ್ಯೋತ್ಸವ ದಿನವನ್ನು ಸಂಭ್ರಮದಿಂದ ಆಚರಿಸುವ ಸಲುವಾಗಿ ಈ ಹಬ್ಬವನ್ನು ಆಚರಿಸಲಾಗುತ್ತದೆ. ಆಗಸ್ಟ್ 15ರ ಆಸುಪಾಸಿನ ದಿನಗಳಲ್ಲಿ ಈ ಹಬ್ಬ ಸಡಗರದಿಂದ ನಡೆಯಲಿದೆ. ವಿವಿಧ ರೀತಿಯ ಸಾಂಸ್ಕೃತಿಕ ಕಾರ್ಯಕ್ರಮಗಳು ಅಲ್ಲಿ ನಡೆಯುತ್ತದೆ.

ಕಳೆದ ಎರಡು ವರ್ಷಗಳ ನಂತರ (ಕೊರೋನ ನಂತರ) ಈ ಬಾರಿ ಮತ್ತೆ ಅದ್ದೂರಿಯಾಗಿ ಈ ಹಬ್ಬವನ್ನು ಆಯೋಜಿಸಲಾಗಿದೆ.

ಪ್ರತಿವರ್ಷ ಈ ಸಂದರ್ಭದಲ್ಲಿ ಭಾರತದಲ್ಲಿ ಸಾಧನೆ ಮಾಡಿರುವ ಗಣ್ಯರೊಬ್ಬರಿಗೆ “FOG HERO” ಅವಾರ್ಡ್” ನೀಡಲಾಗುತ್ತದೆ. ಹೆಚ್ಚಾಗಿ ಚಿತ್ರರಂಗದಲ್ಲಿ ಸಾಧನೆ ಮಾಡಿದವರಿಗೆ ಈ ಪ್ರಶಸ್ತಿ ನೀಡಲಾಗುತ್ತಿದೆ. ಆಶಾ ಪರೇಕ್, ಅಮಿತಾಬ್ ಬಚ್ಚನ್, ದೇವಾನಂದ್, ವಿನೋದ್ ಖನ್ನಾ, ಧರ್ಮೇಂದ್ರ ಮುಂತಾದ ಸಿನಿರಂಗದ ಗಣ್ಯರಿಗೆ ಈ ಪ್ರತಿಷ್ಠಿತ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಈ ಬಾರಿ ದಕ್ಷಿಣ ಭಾರತದ ಖ್ಯಾತ ನಟಿ ಮೇಘನರಾಜ್ “F0G HERO” ಅವಾರ್ಡ್ ಗೆ ಭಾಜನರಾಗಿದ್ದಾರೆ. ಎಂದು ಕಾರ್ಯಕ್ರಮದ ಬಗ್ಗೆ ಹಾಗೂ ಪ್ರಶಸ್ತಿ ಪ್ರದಾನದ ಕುರಿತು
ಸಂಸ್ಥೆಯ ಕ್ರಿಸ್ ಮೂರ್ತಿ ಮಾಹಿತಿ ನೀಡಿದರು.

ಅಮಿತಾಭ್‌ ಬಚ್ಚನ್‌, ಧರ್ಮೇಂದ್ರ ಮುಂತಾದ ಗಣ್ಯರು ಪಡೆದಿರುವ ಈ ಪ್ರತಿಷ್ಠಿತ ಪ್ರಶಸ್ತಿಗೆ ನಾನು ಭಾಜನಳಾಗಿರುವುದಕ್ಕೆ ತುಂಬಾ ಸಂತೋಷವಾಗಿದೆ. ಅಂತಹ ಮಹಾನ್ ನಟರಿಗೆ ಸಂದಿರುವ ಪ್ರಶಸ್ತಿಗೆ ಈ ಬಾರಿ ನಾನು ಆಯ್ಕೆಯಾಗಿರುವುದು ನನ್ನ ಪುಣ್ಯ. ನನ್ನ ತಂದೆಯ ಮೂಲಕ ಈ ವಿಷಯ ನನಗೆ ತಿಳಿಯಿತು. ಆಗಸ್ಟ್21 ರಂದು ನಡೆಯುವ ಅದ್ದೂರಿ ಸಮಾರಂಭದಲ್ಲಿ ಈ ಪ್ರಶಸ್ತಿ ಸ್ವೀಕರಿಸಲಿದ್ದೇನೆ. ಕನ್ನಡ ಚಿತ್ರರಂಗ ಈಗ ಇಡೀ ವಿಶ್ವದಾದ್ಯಂತ ಜನಪ್ರಿಯ. ಕನ್ನಡಿಗಳಾಗಿ ಈ ಪ್ರಶಸ್ತಿ ಸ್ವೀಕರಿಸುತ್ತಿರುವುದು ನನಗೆ ಹೆಚ್ಚಿನ ಖುಷಿಯಾಗಿದೆ ಎಂದರು ನಟಿ ಮೇಘನರಾಜ್.

Must Read

spot_img

Deprecated: preg_replace(): Passing null to parameter #3 ($subject) of type array|string is deprecated in /home/u452565381/domains/kannadabeatz.com/public_html/wp-includes/kses.php on line 1805

Deprecated: preg_replace(): Passing null to parameter #3 ($subject) of type array|string is deprecated in /home/u452565381/domains/kannadabeatz.com/public_html/wp-includes/kses.php on line 1805
Share via
Copy link
Powered by Social Snap