HomeNewsಭಾವಚಿತ್ರ"ದ ಹಾಡುಗಳ ಬಿಡುಗಡೆ*

ಭಾವಚಿತ್ರ”ದ ಹಾಡುಗಳ ಬಿಡುಗಡೆ*

ಕಿರುತೆರೆಯ ಸೂಪರ್ ಸ್ಟಾರ್ ಟಿ.ಎನ್.ಸೀತಾರಾಂ ನಿರ್ದೇಶನದ ’ಮಗಳು ಜಾನಕಿ’ ಮೂಲಕ ಮನೆಮಾತಾಗಿರುವ ಚಿಕ್ಕಮಗಳೂರಿನ ಗಾನವಿ ಲಕ್ಷಣ್, ’ಭಾವಚಿತ್ರ’ದ ಮೂಲಕ ನಾಯಕಿಯಾಗಿ ಚಿತ್ರರಂಗ ಪ್ರವೇಶಿಸಿದ್ದಾರೆ. ಇದು ಅವರ ಅಭಿನಯದ ಮೊದಲ ಸಿನಿಮಾ.

ಈಕೆಯ ಸುತ್ತ ಕಥೆ ಸಾಗುತ್ತದೆ. ಒಂದೂರಲ್ಲಿ ಹಳೆಯ ದೇವಸ್ಥಾನ, ಅಲ್ಲಿನ ಶಿಲ್ಪಕಲೆಯ ಬಗ್ಗೆ ಅಧ್ಯಯನ ನಡೆಸುವ ಹುಡುಗಿಯಾಗಿ ಗಾನವಿ ಕಾಣಿಸಿಕೊಂಡಿದ್ದಾರೆ.
ಕಾರ್ಪೋರೇಟ್ ಕಂಪೆನಿಯಲ್ಲಿ ಫೋಟೋಗ್ರಾಫರ್ ಆಗಿರುವ ಕಥಾ ನಾಯಕ ಚಕ್ರವರ್ತಿ ರೆಡ್ಡಿ . ಶಾಂತಿ ಬಯಸಲು ದೂರದ ಊರಿಗೆ ಹೋಗುತ್ತಾನೆ. ಅಲ್ಲಿ ಹುಡುಗಿಯೊಡನೆ ಪ್ರೀತಿ ಚಿಗುರುತ್ತದೆ. ಮುಂದೆ ಸಾಕಷ್ಟು ತಿರುವುಗಳು ಬರುತ್ತದೆ. ಇತಿಹಾಸಕ್ಕೆ ಸಂಬಂಧಿಸಿದ ಎಳೆಯೊಂದು ಕೂಡ ಇದರಲ್ಲಿ ಇದೆಯಂತೆ. ಅದು ಏನೆಂಬುದನ್ನು ಚಿತ್ರ ನೋಡಬೇಕು.
2017ರಲ್ಲಿ ’ಅವಾಹಯಾಮಿ’ ನಿರ್ದೇಶನ ಮಾಡಿದ್ದ ಗಿರೀಶ್‌ಕುಮಾರ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ತಾರಗಣದಲ್ಲಿ ಗಿರೀಶ್‌ ಬಿಜ್ಜಳ, ಶ್ರೀನಾಥ್‌ರಾವ್, ರಜತ್‌ ಮಯಿ ಮುಂತಾದವರಿದ್ದಾರೆ
ನಾಲ್ಕು ಹಾಡುಗಳಿಗೆ ಗೌತಮ್ ಶ್ರೀವತ್ಸ ಸಂಗೀತ ನೀಡಿದ್ದಾರೆ. ರಿತೇಶ್‌ಕುಮಾರ್ ಸಂಕಲನ, ಅಜಯ್‌ ಜೈ ಛಾಯಾಗ್ರಹಣ ಈ ಚಿತ್ರಕ್ಕಿದೆ. ಬೆಂಗಳೂರು, ಚಿಕ್ಕಬಳ್ಳಾಪುರ, ಹಾವೇರಿ ಮತ್ತು ಗುಡಿಬಂಡೆಯಲ್ಲಿ ಚಿತ್ರೀಕರಣ ನಡೆದಿದೆ.
ಪ್ರಚಾರದ ಸಲುವಾಗಿ ಚಿತ್ರದ ಹಾಡುಗಳನ್ನು ಗಾಯಕ ರಾಜೇಶ್‌ಕೃಷ್ಣನ್ ಲೋಕಾರ್ಪಣೆ ಮಾಡಿ ತಂಡಕ್ಕೆ ಶುಭ ಹಾರೈಸಿದರು. ಇದಕ್ಕೂ ಮುನ್ನ ಮಾದ್ಯಮದವರಿಗೆ ಎರಡು ಹಾಡುಗಳನ್ನು ತೋರಿಸಲಾಯಿತು

Must Read

spot_img
Share via
Copy link
Powered by Social Snap