ಚಿನ್ಮಯಿ ಶ್ರೀಪಾದ್ ತೆಲುಗು ಚಿತ್ರರಂಗದ ಖ್ಯಾತ ನಾಯಕಿಯರಲ್ಲಿ ಒಬ್ಬರು. ಹಲವಾರು ಹಾಡುಗಳಿಗೆ ದನಿಯನ್ನೂ ನೀಡಿರುವ ಚಿನ್ಮಯಿ ಶ್ರೀಪಾದ್ ಅವರು ಬೇಡಿಕೆಯ ಗಾಯಕಿ. ಚಿನ್ಮಯಿ ಅವರು ಗಾಯನದ ಜೊತೆ ತಮ್ಮ ಬೋಲ್ಡ್ ನೆಸ್ ನಿಂದಲೂ ಸಹ ಬಹಳ ಫೇಮಸ್ ಆದವರು.
ಈ ಹಿಂದೆ ಖ್ಯಾತ ಗೀತರಚನೆಕಾರ ವೈರಮುಡಿ ಅವರ ವಿರುದ್ಧವೂ ಸಹ ಮೀಟು ಅಭಿಯಾನದಡಿ ತಮ್ಮ ಮೇಲೆ ನೀಡಿದ ಲೈಂಗಿಕ ಕಿರುಕುಳದ ಬಗ್ಗೆ ಹೇಳಿಕೊಂಡಿದ್ದರು. ಹೌದು ಚಿನ್ಮಯಿ ಅವರು ಖ್ಯಾತ ಗೀತ ರಚನೆಕಾರ ವೈರಮುಡಿ ಅವರು ತಮ್ಮ ಮೇಲೆ ಲೈಂಗಿಕ ಕಿರುಕುಳ ನೀಡಿದ್ದರು ಎಂದು ಓಪನ್ ಆಗಿ ಹೇಳಿಕೊಂಡಿದ್ದರು. ಚಿನ್ಮಯಿ ಅವರ ಈ ಬೋಲ್ಡ್ ನೆಸ್ ಗೆ ಸಮಂತಾ ಸೇರಿದಂತೆ ಇನ್ನೂ ಹಲವಾರು ಮಂದಿ ಬೆಂಬಲ ವ್ಯಕ್ತಪಡಿಸಿದರು. ಹಾಗೆ ಇನ್ನೂ ಕೆಲ ಮಂದಿ ಇವರ ಕಾಲ್ ಎಳೆದು ಟ್ರೋಲ್ ಗಳನ್ನು ಮಾಡಿದರು.
ಇನ್ನು ಇದೀಗ ಮತ್ತೊಂದು ಬೋಲ್ಡ್ ಸ್ಟೇಟ್ಮೆಂಟ್ ನೀಡುವ ಮೂಲಕ ಚಿನ್ಮಯಿ ಶ್ರೀಪಾದ್ ಅವರು ಸಕತ್ ಸೌಂಡ್ ಮಾಡುತ್ತಿದ್ದಾರೆ. ಹೌದು ಮಾಧ್ಯಮ ಮಿತ್ರರೊಬ್ಬರು ನೀವು ಹಾಡು ಹಾಡುವಾಗ ಸ್ಟೇಜ್ ಮೇಲೆ ಸೀರೆ ಯಾಕೆ ಧರಿಸಲ್ಲ ಮಾಡರ್ನ್ ಡ್ರೆಸ್ ಹಾಕುತ್ತೀರಾ ಎಂದು ಪ್ರಶ್ನೆ ಕೇಳಿದ್ದಾರೆ.
ಈ ಪ್ರಶ್ನೆಗೆ ತಮ್ಮದೇ ಆದ ರೀತಿಯಲ್ಲಿ ಬೋಲ್ಡ್ ಉತ್ತರ ನೀಡಿರುವ ಚಿನ್ಮಯಿ ಶ್ರೀಪಾದ್ ಅವರು ಸೀರೆ ಧರಿಸಿ ಹಾಡಲು ನಿಂತರೆ ಫೋಟೋಗ್ರಾಫರ್ ಗಳು ನನ್ನ ಎದೆ ಮತ್ತು ಸೊಂಟದ ಭಾಗವನ್ನು ಭಿನ್ನ ವಿಭಿನ್ನ ರೀತಿಯಲ್ಲಿ ಫೋಟೋ ತೆಗೆದು ವೆಬ್ ಸೈಟ್ ಗಳಲ್ಲಿ ಹಾಕುತ್ತಾರೆ ಸಾರ್ , ಅದಕ್ಕಾಗಿಯೇ ನಾನು ಜೀನ್ಸ್ ಧರಿಸುವುದು ಆ ರೀತಿ ಜೀನ್ಸ್ ಧರಿಸಿದರೆ ಯಾರು ಸೊಂಟ ಮತ್ತು ಎದೆಯ ಭಾಗದ ಚಿತ್ರಗಳನ್ನು ಭಿನ್ನ ವಿಭಿನ್ನ ರೀತಿಯಲ್ಲಿ ತೆಗೆಯುವುದಿಲ್ಲ ಎಂದು ಬೋಲ್ಡ್ ಆಗಿ ಮಾತನಾಡಿದ್ದಾರೆ.