HomeNewsರಂಜಿತ್ ರಾವ್ ಅವರು ನಿರ್ದೇಶನದ ಜೊತೆಗೆ ನಿರ್ಮಾಣ ಮಾಡಿರುವ “ ಪ್ರಾಯಶಃ” ತೆರೆಗೆ ಬರಲು ಸಜ್ಜಾಗಿದೆ.

ರಂಜಿತ್ ರಾವ್ ಅವರು ನಿರ್ದೇಶನದ ಜೊತೆಗೆ ನಿರ್ಮಾಣ ಮಾಡಿರುವ “ ಪ್ರಾಯಶಃ” ತೆರೆಗೆ ಬರಲು ಸಜ್ಜಾಗಿದೆ.

ಹೊಸ ತಂಡದ
ಹೊಸ ಕನಸು..


ಬಹುತೇಕ ರಂಗಭೂಮಿ ಪ್ರತಿಭೆಗಳನ್ನು ಮುಂದಿಟ್ಟುಕೊಂಡು ಸೈಕಾಲಜಿಕಲ್ ಥ್ರಿಲ್ಲರ್ ಚಿತ್ರವನ್ನು ತೆರೆಯ ಮೇಲೆ ಕಟ್ಟಿಕೊಡಲು ರಂಜಿತ್ ಮತ್ತವರ ತಂಡ ಎಲ್ಲಾ ಸಿದ್ದತೆ ಮಾಡಿಕೊಂಡಿದೆ.
ಮುಂದಿನವಾರ ರಾಜ್ಯಾದ್ಯಂತ ಚಿತ್ರ ತೆರೆಗೆ ಬರಲಿದೆ. ಅದರಲ್ಲಿಯೂ ಕರಾವಳಿ ಭಾಗದ ಹಕ್ಕುಗಳನ್ನು ವಿರಕರೊಬ್ಬರು ಖರೀದಿ ಮಾಡಿರುವ ಹಿನ್ನೆಲೆಯಲ್ಲಿ ಬಿಡುಗಡೆಗೆ ಮುನ್ನವೇ ಚಿತ್ರತಂಡ ಅರ್ಧದಷ್ಟು ಸೇಫ್ ಆಗಿದೆ.


ಚಿತ್ರದ ಕುರಿತು ಮಾಹಿತಿ ಹಂಚಿಕೊಂಡ ನಿರ್ದೇಶಕ ರಂಜಿತ್,ಕೊಲೆಯ ಸುತ್ತ ನಡೆಯುವ ಕಥೆಯಲ್ಲಿ ಆರಂಭದಲ್ಲಿ ಕೊಲೆಗಾರ ಪತ್ತೆಯಾಗುತ್ತಾನೆ. ಅಲ್ಲಿಂದ ನಿಜವಾದ ಕುತೂಹಲ ಆರಂಭವಾಗಲಿದೆ. ಕೊಲೆ ಮಾಡಿದವನು ಎಂದು ನಂಬುವಾಗ ಮತ್ತೊಬ್ಬ ಇರಬೇಕು ಅನ್ನಿಸುತ್ತದೆ. ಮಗದೊಮ್ಮೆ ಮತ್ತೊಬ್ಬ ಇರಬೇಕು ಎನ್ನುವ ಸುತ್ತಾ ಸಾಗಲಿದೆ ಇದೇ ಪ್ರಾಯಶಃ.
ಚಿತ್ರದ ಕೊನೆಯ 40 ನಿಮಿಷಗಳ ಕಾಲ ರಿವರ್ಸ್ ಸನಿವೇಶದಲ್ಲಿ ಚಿತ್ರಕತೆ ಸಾಗಲಿದೆ. ಹೀಗಿರಬಹುದಾ ಹಾಗಿರಬಹುದಾ ಎನ್ನುವ ಕುತೂಹಲ ಹೆಚ್ಚುತ್ತಾ ಸಾಗಲಿದೆ. ಧಾರಾವಾಹಿಯಲ್ಲಿ ಕೆಲಸ ಮಾಡುತ್ತಿದ್ದರಿಂದ ಎರಡು ವರ್ಷ ಕೆಲಸ ಬಿಟ್ಟು ಸಿನಿಮಾಗಾಗಿಯೇ ದುಡಿದ್ದೇವೆ ಎಂದರು.
ಚಿತ್ರದಲ್ಲಿ ರಂಗಭೂಮಿಯ ಅನುಭವಿ ಪ್ರತಿಭಾವಂತರಾದ ವಿಜಯ್ ಶೋಭರಾಜ್ ಪಾವೂರ್, , ಮಧುಹೆಗಡೆ, ರಾಹುಲ್, ಕೃಷ್ಣಾ ಭಟ್ ಸೇರಿದಂತೆ ಹಿರಿ ಕಿರಿ ಕಲಾವಿದರ ದಂಡು ಚಿತ್ರದಲ್ಲಿದೆ.

ಮೋಡಿ‌ ಮಾಡುವ ಕಲಾವಿದ
ವಿಜಯ್ ಶೋಭರಾಜ್ ಪಾವೂರ್ :

ಗೀತಾ ಧಾರಾವಾಹಿ ಮೂಲಕ ತಮ್ಮ ಹಾವ ಭಾವದಿಂದಲೇ ಗಮನ ಸೆಳೆದಿರುವ ಕರಾವಳಿ ತೀರ ಮಂಗಳೂರಿನ ಅಪ್ಪಟ ದೇಸೀ ಪ್ರತಿಭೆ ವಿಜಯ್ ಶೋಭರಾಜ್ ಪಾವೂರ್.ಮೋಡಿ‌ಮಾಡುವ ಕಲಾವಿದರಲ್ಲಿ ಒಬ್ಬರು. ಹಾವ ಭಾವದಿಂದಲೇ ಅಭಿನಯ ನೀಡುವ ಕಲೆ ಕರಗತ ಮಾಡಿಕೊಂಡವರು

ನಟನೆ,ರಿಯಾಲಿಟಿ ಶೋ ಯಾವುದೇ ಇರಲಿ ತನ್ನ ಪಾಲಿಗೆ ಬಂದ ಕೆಲಸವನ್ನು ಅಚ್ಚುಕಟ್ಟಾಗಿ ನಿಭಾಯಿಸಿ ಅದರಲ್ಲಿ ಸೈ ಎನಿಸಿಕೊಳ್ಳುವ ಕಲೆ ಕರಗತ ಮಾಡಿಕಂಡ ವಿಜಯ್ ಶೋಭರಾಜ್ ಅವರು ಪ್ರಾಯಶ: ಚಿತ್ರದಲ್ಲಿ ವಿಭಿನ್ನ‌ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅವರಿಗೆ ಈ ಚಿತ್ರದ ಮೂಲಕ ಮತ್ತಷ್ಟು ಅವಕಾಶಗಳು ಒಲಿದು ಬರಲಿವೆ ಎನ್ನುವುದು ಚಿತ್ರ ತಂಡದ ಮಾತು.

Vijay Shobharaj Pavoor #Krishnabhat #MadhuHegade #Rahul #kannadafilm #cininewskannada #prayashaha Chigo Ramesh Cininews Kannada Kannadafilm Cininews Kannada Madhu Hegde

Must Read

spot_img

Deprecated: preg_replace(): Passing null to parameter #3 ($subject) of type array|string is deprecated in /home/u452565381/domains/kannadabeatz.com/public_html/wp-includes/kses.php on line 1805

Deprecated: preg_replace(): Passing null to parameter #3 ($subject) of type array|string is deprecated in /home/u452565381/domains/kannadabeatz.com/public_html/wp-includes/kses.php on line 1805
Share via
Copy link
Powered by Social Snap