ಇತ್ತೀಚಿನ ದಿನಗಳಲ್ಲಿ ಕನ್ನಡ ಕಿರುತೆರೆ ದಿನದಿಂದ ದಿನಕ್ಕೆ ದೊಡ್ಡ ಮಟ್ಟದಲ್ಲಿ ಬೆಳೆಯುತ್ತಿದೆ ಮತ್ತು ಹೆಸರನ್ನು ಮಾಡುತ್ತಿದೆ. ಕನ್ನಡ ಪ್ರೇಕ್ಷಕರು ಟಿವಿ ಮಾಧ್ಯಮವನ್ನು ಅತಿ ಹೆಚ್ಚಾಗಿ ವೀಕ್ಷಿಸುತ್ತಾರೆ ನ್ಯೂಸ್ ಚಾನೆಲ್ ಗಳು ಮತ್ತು ಎಂಟರ್ಟೈನ್ಮೆಂಟ್ ಚಾನೆಲ್ ಗಳು ಕನ್ನಡದಲ್ಲಿ ಅಗಾಧವಾಗಿ ಇದ್ದು ಜನರಿಗೆ ಯಥೇಚ್ಛವಾಗಿ ಮನರಂಜನೆಯನ್ನು ನೀಡುತ್ತವೆ.
ಇನ್ನು ಕನ್ನಡ ಕಿರುತೆರೆಯಲ್ಲಿ ಈಗಾಗಲೇ ಸಾಕಷ್ಟು ಚಾನೆಲ್ ಗಳು ಇದ್ದು ಇದೀಗ ಈ ಪಟ್ಟಿಗೆ ಮತ್ತೊಂದು ಬಿಗ್ ಚಾನೆಲ್ ಸೇರ್ಪಡೆಯಾಗಲು ರೆಡಿ ಇದೆ. ಆದರೆ ಇದೊಂದು ತುಂಬಾ ಸ್ಪೆಷಲ್ ಎನಿಸುವ ಚಾನೆಲ್ ಆಗಿರಲಿದೆ. ಯಾಕೆಂದರೆ ಕನ್ನಡದ ಮೂರು ಬಿಗ್ ಸ್ಟಾರ್ ಗಳಾದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ , ಚಾಲೇಂಜಿಂಗ್ ಸ್ಟಾರ್ ದರ್ಶನ್ ಮತ್ತು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ಶುರು ಮಾಡಲಿದ್ದಾರೆ.
ಹೌದು ಈ ಬಗ್ಗೆ ಸುಧಾ ಮ್ಯಾಗಜಿನ್ ವರದಿಗಾರರು ಕಿಚ್ಚ ಸುದೀಪ್ ಅವರ ಸಂದರ್ಶನದಲ್ಲಿ ಮಾತನಾಡಿದಾಗ ಸ್ವತಃ ಕಿಚ್ಚ ಸುದೀಪ್ ಅವರೇ ತಿಳಿಸಿದ್ದಾರೆ. ಪುನೀತ್ ದಚ್ಚು ಮತ್ತೆ ಸುದೀಪ್ ಅವರು ಹೊಸ ಚಾನೆಲ್ ಆರಂಭಿಸುವುದರ ಬಗ್ಗೆ ಸ್ವತಃ ಕಿಚ್ಚ ಸುದೀಪ್ ಅವರ ಹೇಳಿಕೊಂಡಿದ್ದಾರೆ ಎನ್ನಲಾಗಿದೆ.
ಇದೀಗ ಚುನಾವಣಾ ಸಮಯವಾಗಿರುವುದರಿಂದ ಚಾನೆಲ್ ಆರಂಭವನ್ನು ಮುಂದೂಡಲಾಗಿದೆ ಎಂದು ಸಹ ಮಾಹಿತಿ ಎಲ್ಲೆಡೆ ಹರಿದಾಡುತ್ತಿದೆ. ಇದೀಗ ಹರಿದಾಡುತ್ತಿರುವ ಸುದ್ದಿಗಳ ಪ್ರಕಾರ ಈ ಮೂವರು ಸೇರಿ ಹೊಸ ಚಾನೆಲ್ ಆರಂಭಿಸುವುದು ಪಕ್ಕಾ ಎನ್ನಲಾಗುತ್ತಿದೆ.