HomeNewsಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿದೆ ವಾಸುಕಿ ವೈಭವ್ ಹಾಡಿರುವ ಈ ಆಲ್ಬಂ ಸಾಂಗ್.

ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿದೆ ವಾಸುಕಿ ವೈಭವ್ ಹಾಡಿರುವ ಈ ಆಲ್ಬಂ ಸಾಂಗ್.

ಕಾಶ್ಮೀರದಲ್ಲಿ “ನಿನದೇ ನೆನಪು”.

ಜನಪ್ರಿಯ ಗೀತರಚನೆಕಾರ ಗೌಸ್ ಫಿರ್ ಬರೆದಿರುವ ” ಹೃದಯಕ್ಕೆ ಹೃದಯವೇ ಕಡು ವೈರಿ” ಎಂದು ಆರಂಭವಾಗುವ “ನಿನದೇ ನೆನಪು” ಎಂಬ ಶೀರ್ಷಿಕೆ ಯುಳ್ಳ ಈ ಆಲ್ಬಂ ಸಾಂಗ್ ಸ್ವತಂತ್ರ ದಿನಾಚರಣೆಯ ದಿನ ಬಿಡುಗಡೆಯಾಗಿದೆ.

ಈ ಆಲ್ಬಂ ಕನ್ನಡದ ಬಹು ಅದ್ದೂರಿ ನಿರ್ಮಾಣ ಎಂದೇ ಹೇಳಬಹುದು, ಯಾಕೆಂದರೆ ಇದರ ಚಿತ್ರೀಕರಣ ಕಾಶ್ಮೀರ ಮತ್ತು ಲೇಹ್‌ ನಲ್ಲಿ ನಡೆದಿದೆ ಎಂದರೆ ಈ ಆಲ್ಬಂ ಹಾಡಿನ ನಿರ್ಮಾಣದ ವೈಭವವನ್ನು ಹೇಳಬಹುದು.

ಸರವಣ್ ಮತ್ತು ಪ್ರತಿಮಾ ಈ ಆಲ್ಬಂ ಸಾಂಗ್ ನಲ್ಲಿ ಅಭಿನಯಿಸಿದ್ದಾರೆ.

ಸರವಣ್ ಈಗಾಗಲೇ ಸಬ್ ವೇ ಎಂಬ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಆ ಚಿತ್ರ ಬಿಡುಗಡೆ ಹಂತದಲ್ಲಿದೆ.
ಟಿಕ್ ಟಾಕ್ ಮೂಲಕ ಮನೆಮಾತಾಗಿರುವ ಪ್ರತಿಮ ಈಗಾಗಲೇ ಕೆಲವು ಆಲ್ಬಂ ಗಳಲ್ಲಿ ನಟಿಸಿದ್ದಾರೆ.

ಈ ಆಲ್ಬಂ ನಿರ್ಮಾಣ ಮಾಡಿದವರು ಆಂಜಿ ಬಾಬು ಎಂಬುವವರು, ಅವರಿಗೆ ಬೆಂಬಲವಾಗಿ ನಿಂತವರು ಫೈಯಿಂಗ್ ಕಿಂಗ್ ಮಂಜು ಎಂಬುವವರು.

ಈ ಮೊದಲು ಮಯೂರ್ ಪಟೇಲ್ ಅಭಿನಯದ ರಾಜೀವ ಚಿತ್ರವನ್ನೂ ಮಂಜು ನಿರ್ದೇಶಿಸಿದ್ದಾರೆ.

ಈ ಹಾಡನ್ನು ನಿರ್ದೇಶಿಸಿರುವವರು ಎಂ. ವೈ. ಕೃಷ್ಣ, ಇವರಿಗೆ ನಿರ್ದೇಶನದ ಅನುಭವವೂ ಇದೆ, ಅವರು ಮುಂದಿನ ದಿನಗಳಲ್ಲಿ ಸ್ವತಂತ್ರ ನಿರ್ದೇಶಕನಾಗುವ ಕನಸೂ ಇದೆ, ಅದರ ಮೊದಲ ಹೆಜ್ಜೆಯಾಗಿ ಈ ಆಲ್ಬಂ ಹಾಡನ್ನು ನಿರ್ದೇಶಿಸಿದ್ದಾರೆ. ತುಂಬಾ ಸುಂದರವಾಗಿ ಚಿತ್ರೀಕರಿಸಿದ್ದಾರೆ, ಹಾಡಿನಲ್ಲಿ ಕಾಶ್ಮೀರದ ಮನಮೋಹಕ ಸನ್ನಿವೇಶಗಳು ಕಣ್ಣಿಗೆ ಮುದ ನೀಡುತ್ತಲೇ ಸಾಗುತ್ತದೆ. ಈ ಹಾಡಿನ ಮತ್ತೊಂದು ಹೆಚ್ಚುಗಾರಿಕೆ ಎಂದರೆ ವಾಸುಕಿ ವೈಭವ್ ಅವರ ಸುಮಧುರ ಗಾಯನ ಹಾಗೂ ರೋಹಿತ್ ಸೊವಾರ್ ಅವರ ಸಂಗೀತ ನಿರ್ದೇಶನ.

ಹಾಡಿನ ಛಾಯಾಗ್ರಹಣ ಮಾಡಿದವರು ಕಾರ್ತಿಕ್ . ಈ ಹಾಡನ್ನು ನಿರ್ಮಾಣ ಮಾಡಿದ್ದು ಚಾಣಕ್ಯ ಪಿಲಂಸ್. ಆಲ್ಬಂ ಬಿಡುಗಡೆಗೆ ರಾಜಕಾರಣಿ *ನರೇಂದ್ರ ಬಾಬು* , ನಿರ್ಮಾಪಕ *ಸಯ್ಯದ್ ಸಲಾಂ* , *ರಮೇಶ್* ಆಗಮಿಸಿದ್ದರು.

ಈ ಹಾಡಿನ ಸಾಹಿತ್ಯ, ಚಿತ್ರೀಕರಣವಾದ ಶೈಲಿ, ಅದಕ್ಕೆ ಆಯ್ಕೆ ಮಾಡಿಕೊಂಡ ಸುಂದರ ಸ್ಥಳಗಳು, ಖರ್ಚು ಮಾಡಿರುವ ರೀತಿ ನೋಡಿದರೆ ನಿನದೇ ನೆನೆಪು ಆಲ್ಬಂ ಸಾಂಗ್ ಕನ್ನಡದಲ್ಲಿ ನಂ. ಒನ್ ಸ್ಥಾನದಲ್ಲಿ ನಿಲ್ಲಬಹುದು, ಅಷ್ಟು ಸುಂದರ ಮತ್ತು ಮಧುರವಾಗಿದೆ.

Must Read

spot_img

Deprecated: preg_replace(): Passing null to parameter #3 ($subject) of type array|string is deprecated in /home/u452565381/domains/kannadabeatz.com/public_html/wp-includes/kses.php on line 1805

Deprecated: preg_replace(): Passing null to parameter #3 ($subject) of type array|string is deprecated in /home/u452565381/domains/kannadabeatz.com/public_html/wp-includes/kses.php on line 1805
Share via
Copy link
Powered by Social Snap