ಇಂದು ರಾಜ್ಯಾದ್ಯಂತ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಯಜಮಾನ ಚಿತ್ರ ಬಿಡುಗಡೆಗೊಂಡು ಭರ್ಜರಿ ಓಪನಿಂಗ್ ಪಡೆದುಕೊಂಡಿದೆ. ಇಂದು ಮೈಸೂರಿನಲ್ಲಿ ನಡೆಯುತ್ತಿರುವ ಛಾಯಾಚಿತ್ರ ಪ್ರದರ್ಶನ ಕಾರ್ಯಕ್ರಮದಲ್ಲಿ ಭಾಗಿಯಾಗಿರುವ ನಟ ದರ್ಶನ್ ಅವರು ತಮ್ಮ ಯಜಮಾನ ಚಿತ್ರದ ಬಗ್ಗೆ ಮಾತನಾಡಿದರೂ ಹಾಗೆಯೇ ನಮ್ಮ ಭಾರತದ ವೀರ ವಿಂಗ್ ಕಮಾಂಡರ್ ಅಭಿನಂದನ್ ಅವರ ಪತಿಯೂ ಸಹ ಮಾತನಾಡಿದರು.
ನಿಮಗೆಲ್ಲ ತಿಳಿದಿರುವ ಹಾಗೆ ಅಭಿನಂದನ್ ಅವರನ್ನು ಪಾಕಿಸ್ತಾನ ಆರ್ಮಿ ಸೆರೆ ಹಿಡಿದು ಬಂಧನದಲ್ಲಿ ಇಟ್ಟುಕೊಂಡಿತ್ತು. ಇದೀಗ ಅಭಿನಂದನ್ ಅವರನ್ನು ಪಾಕಿಸ್ತಾನ ಬಿಡುಗಡೆಗೊಳಿಸಿದ್ದು ಇಂದು ಭಾರತ ದೇಶಕ್ಕೆ ಅವರು ಮರಳುತ್ತಿದ್ದಾರೆ. ಈ ಕುರಿತಾಗಿ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಎಲ್ಲರೂ ಮೆಚ್ಚಿಕೊಳ್ಳುವಂತಹ ಉತ್ತರವನ್ನು ನೀಡಿದ್ದಾರೆ.
ನಾವೆಲ್ಲ ಯಾವ ಹೀರೋ ಸರ್ ನಾವು ಡಮ್ಮಿ ನಿಜವಾದ ಹೀರೋ ಎಂದರೆ ಅಭಿನಂದನ್ ಅವರು ಎಂದು ದರ್ಶನ್ ಅವರು ತಿಳಿಸಿದ್ದಾರೆ. ನಾವು ತೆರೆಯ ಮೇಲೆ ನಟಿಸುತ್ತೇವೆ ಅಷ್ಟೇ ಆದರೆ ಬಾರ್ಡರ್ ನಲ್ಲಿ ನಿಂತು ದೇಶವನ್ನು ಕಾಯುವವರು ನಿಜವಾದ ಹೀರೋ ಎಂಬ ಮಾತುಗಳನ್ನು ದರ್ಶನ್ ಅವರು ಆಡಿದ್ದಾರೆ.