HomeCelebritiesದಿಗಂತ್ - ತರುಣ್ ಚಂದ್ರ ನಟನೆಯ ನೂತನ ಚಿತ್ರಕ್ಕೆ ಚಾಲನೆ.

ದಿಗಂತ್ – ತರುಣ್ ಚಂದ್ರ ನಟನೆಯ ನೂತನ ಚಿತ್ರಕ್ಕೆ ಚಾಲನೆ.

ಕಮರ್ ಫ್ಯಾಕ್ಟರಿ ಅರ್ಪಿಸುವ, ಕಮರ್ ಡಿ ಹಾಗೂ ವಿಜಯಲಕ್ಷ್ಮಿ ವೀರ ಮಾಚನನ್ ನಿರ್ಮಿಸುತ್ತಿರುವ ನೂತನ ಚಿತ್ರದ ಮುಹೂರ್ತ ಸಮಾರಂಭ ಮಲ್ಲೇಶ್ವರದ ಶ್ರೀಗಣಪತಿ ದೇವಸ್ಥಾನದಲ್ಲಿ ನೆರವೇರಿತು. ದಿಗಂತ್ ಹಾಗೂ ತರುಣ್ ಚಂದ್ರ ಈ ಚಿತ್ರದ ನಾಯಕರಾಗಿ ನಟಿಸುತ್ತಿದ್ದಾರೆ.
ಕಾವ್ಯ ಶೆಟ್ಟಿ ಮತ್ತು ಕೊಮಿಕಾ ಆಂಚಲ್ ಈ ಚಿತ್ರದ ನಾಯಕಿಯರು.

ದೇವರ ಮೇಲೆ ಸೆರೆಹಿಡಿಯಲಾದ ಮೊದಲ ಸನ್ನಿವೇಶಕ್ಕೆ ನಿರ್ಮಾಪಕರಾದ ಕಮರ್ ಹಾಗೂ ಕಿರಣ್ ವೆಂಕಟ್ ವೀರಮಾಚನೆನಿ ಆರಂಭ ಫಲಕ ತೋರಿದರು. ವಾಸಿಂ ಕ್ಯಾಮೆರಾ ಚಾಲನೆ ಮಾಡಿದರು. ಶಾಸಕ ರೇಣಕಾಚಾರ್ಯ ಅವರು ಮುಖ್ಯ ಅತಿಥಿಯಾಗಿ ಆಗಮಿಸಿ ಚಿತ್ರತಂಡಕ್ಕೆ ಶುಭ ಕೋರಿದರು.

ಮುಂಬೈ ಮೂಲದ ಆನಂದ್ ಪ್ರಕಾಶ್ ಮಿಶ್ರ ಈ ಚಿತ್ರದ ನಿರ್ದೇಶಕರು. ಇದು ಅವರಿಗೆ ಚೊಚ್ಚಲ ಸಿನಿಮಾ. ಥ್ರಿಲ್ಲರ್ ಸಿನಿಮಾಗಿರುವುದರಿಂದ ಕಥೆ ಬಗ್ಗೆ ಹೆಚ್ಚು ಹೇಳುವ ಹಾಗಿಲ್ಲ. ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದರು ನಿರ್ದೇಶಕ ಆನಂದ್ ಪ್ರಕಾಶ್ ಮಿಶ್ರ.

ಬಹಳ ದಿನಗಳ ನಂತರ ನಾನು ಈ ಚಿತ್ರದ ಮೂಲಕ ನಟನೆಗೆ ಮರಳಿ ಬಂದಿದ್ದೀನಿ. ದಿಗಂತ್ , ಕಮರ್ ಅವರ ಜೊತಗೆ ಕ್ರಿಕೇಟ್ ಆಡಿದ್ದೀನಿ. ಆದರೆ ಸಿನಿಮಾ ಮಾಡಿಲ್ಲ. ಇದೇ ಮೊದಲ ಬಾರಿಗೆ ಅವರ ಜೊತೆಗೆ ಸಿನಿಮಾ ಮಾಡುತ್ತಿದ್ದೇನೆ. ಎಲ್ಲರ ಬೆಂಬಲವಿರಲಿ ಎಂದರು ತರುಣ್ ಚಂದ್ರ.

ನನ್ನದು ಈ ಚಿತ್ರದಲ್ಲಿ ಬರಹಗಾರನ ಪಾತ್ರ. ಕಮರ್ ಹಾಗೂ ತರುಣ್ ನನ್ನ ಬಹಳ ದಿನಗಳ ಸ್ನೇಹಿತರು. ಕಮರ್ ಯಾವಾಗಲೂ ಒಂದು ಸಿನಿಮಾ ಮಾಡೋಣ ಎನ್ನುತ್ತಿದ್ದರು. ಈಗ ಸಮಯ ಕೂಡಿ ಬಂದಿದೆ ಎಂದರು ದಿಗಂತ್.

ನನಗೆ ಇವರೆಲ್ಲರೂ ಮೊದಲಿಂದಲೂ ಪರಿಚಯ. ಈ ಚಿತ್ರದಲ್ಲಿ ನಟಿಸುತ್ತಿರುವುದು ಸಂತಸ ತಂದಿದೆ. ನಿರ್ದೇಶಕರು ಕಥೆ ಬಗ್ಗೆ ಹೆಚ್ಚು ಹೇಳಿಲ್ಲ ಎನ್ನುತ್ತಾರೆ ಕಾವ್ಯ ಶೆಟ್ಟಿ.

ಮತ್ತೊಬ್ಬ ನಾಯಕಿ‌ ಕೊಮಿಕ ಆಂಚಲ್ ಸಹ ಸಿನಿಮಾ ಕುರಿತು‌ ಮಾತನಾಡಿದರು.

ನಿರ್ದೇಶಕ ಆನಂದ್ ಪ್ರಕಾಶ್ ಮಿಶ್ರ ಅವರನ್ನು ಮುಂಬೈನಲ್ಲಿ ಭೇಟಿ ಯಾದಾಗ ಈ ಕಥೆ ಹೇಳಿದರು. ಇಷ್ಟವಾಯಿತು. ನಾಲ್ಕು ಹಾಡುಗಳಿದೆ. ಆನಂದ್ ರಾಜ್ ವಿಕ್ರಮ್ ಸಂಗೀತ ನೀಡುತ್ತಿದ್ದಾರೆ. ಹಿರಿಯ ಛಾಯಾಗ್ರಾಹಕ ಪಿ.ಕೆ.ಎಚ್ ದಾಸ್ ಛಾಯಾಗ್ರಹಣ ಈ ಚಿತ್ರಕ್ಕಿದೆ. ಇದೇ ಏಳರಿಂದ ಬೆಂಗಳೂರು, ಕೊಡಗು ಮುಂತಾದ ಕಡೆ ನಲವತ್ತು ದಿನಗಳ ಚಿತ್ರೀಕರಣ ನಡೆಯಲಿದೆ ಎಂದು ನಿರ್ಮಾಪಕ ಕಮರ್ ತಿಳಿಸಿದರು. ಮತ್ತೊಬ್ಬ ನಿರ್ಮಾಪಕ ಕಿರಣ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Must Read

spot_img
Share via
Copy link
Powered by Social Snap