HomeNewsವಿಭಿನ್ನ ಕಥಾಹಂದರದ "ಗೋವಿಂದ ಗೋವಿಂದ" ಚಿತ್ರ ನವೆಂಬರ್ 26 ರಂದು ರಾಜ್ಯಾದ್ಯಂತ ಬಿಡುಗಡೆ.

ವಿಭಿನ್ನ ಕಥಾಹಂದರದ “ಗೋವಿಂದ ಗೋವಿಂದ” ಚಿತ್ರ ನವೆಂಬರ್ 26 ರಂದು ರಾಜ್ಯಾದ್ಯಂತ ಬಿಡುಗಡೆ.

ಶೈಲೇಂದ್ರ ಪ್ರೊಡಕ್ಷನ್ಸ್ ಹಾಗೂ ಎಲ್.ಜಿ.ಕ್ರಿಯೇಷನ್ಸ್ ಅವರು ರವಿ ಗರಣಿ ಪ್ರೊಡಕ್ಷನ್ಸ್ ಸಹಯೋಗದೊಂದಿಗೆ ನಿರ್ಮಿಸಿರುವ “ಗೋವಿಂದ ಗೋವಿಂದ” ಚಿತ್ರ ಇದೇ ನವೆಂಬರ್ 26 ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.

ಈ ಕುರಿತು ಮಾಹಿತಿ ನೋಡಲು ಚಿತ್ರ ತಂಡ ಪತ್ರಿಕಾಗೋಷ್ಠಿ ಆಯೋಜಿಸಿತ್ತು.

ರಂಗಭೂಮಿಯಲ್ಲಿ ಅನುಭವವಿರುವ ನನಗೆ, ಹಿರಿತರೆಯಲ್ಲಿ ಮೊದಲ ಚಿತ್ರ. ರವಿ ಆರ್ ಗರಣಿ ಅವರು ಮೂಲತಃ ನಿರ್ದೇಶಕರೇ ಆಗಿದ್ದರೂ, ನನಗೆ ನಿರ್ದೇಶನದ ಜವಾಬ್ದಾರಿ ನೀಡಿದ್ದಕ್ಕಾಗಿ ಅವರಿಗೆ ಹಾಗೂ ಇತರ ನಿರ್ಮಾಪಕರಿಗೆ ಧನ್ಯವಾದ. ಕಾಮಿಡಿ, ಸಸ್ಪೆನ್ಸ್ ಥ್ರಿಲ್ಲರ್ ಹಾಗೂ ಕೌಟುಂಬಿಕ ಕಥಾಹಂದರದ ನಮ್ಮ ಚಿತ್ರದಲ್ಲಿ ಬಹುದೊಡ್ಡ ತಾರಾಗಣ ಹಾಗೂ ನುರಿತ ತಂತ್ರಜ್ಞರಿದ್ದಾರೆ. ಇದೇ ಇಪ್ಪತ್ತಾರರಂದು ಸಿನಿಮಾ ತೆರೆಗೆ ಬರಲಿದೆ.. ನೋಡಿ ಹರಿಸಿ ಎಂದರು ನಿರ್ದೇಶಕ ತಿಲಕ್.

ನಾನು, ಕಿಶೋರ್ ಹಾಗೂ ಶೈಲೇಂದ್ರ ಬಾಬು ಮೂವರು ಸೇರಿ ಈ ಚಿತ್ರ ನಿರ್ಮಾಣ ಮಾಡುತ್ತಿದ್ದೇವೆ. ಚಿತ್ರ ಚೆನ್ನಾಗಿ ಮೂಡಿಬಂದಿದೆ. ಉತ್ತಮ ಚಿತ್ರಗಳಿಗೆ ಮಾಧ್ಯಮದ ಸಹಕಾರ ಇದೆ ಇರುತ್ತದೆ. ನಮ್ಮ ಚಿತ್ರಕ್ಕೆ ನಿಮ್ಮ ಪ್ರೋತ್ಸಾಹ ಸ್ವಲ್ಪ ಹೆಚ್ಚಿರಲಿ ಎಂದರು ನಿರ್ಮಾಪಕ ರವಿ ಆರ್ ಗರಣಿ.

ನಮ್ಮ ಶೈಲೇಂದ್ರ ಪ್ರೊಡಕ್ಷನ್ಸ್ ವತಿಯಿಂದ ನಿರ್ಮಾಣವಾಗಿರುವ ಎಲ್ಲಾ ಚಿತ್ರಗಳಿಗೂ ಮಾಧ್ಯಮ ನೀಡಿರುವ ಪ್ರೋತ್ಸಾಹ ಅಷ್ಟಿಷ್ಟಲ್ಲ. ಇದೇ ಮೊದಲ ಬಾರಿಗೆ ನಮ್ಮ ಸಂಸ್ಥೆ, ಬೇರೆ ಸಂಸ್ಥೆಗಳ ಜೊತೆ ಸೇರಿ ನಿರ್ಮಾಣ ಮಾಡಿದೆ. ಅನುಭವಿ ಕಲಾವಿದರ ಹಾಗೂ ತಂತ್ರಜ್ಞರ ಸಮ್ಮಿಲನದಲ್ಲಿ ಉತ್ತಮ ಚಿತ್ರ ಮೂಡಿಬಂದಿದೆ. ನಿಮ್ಮ ಪ್ರೋತ್ಸಾಹವಿರಲಿ ಎಂದರು ನಿರ್ಮಾಪಕ ಶೈಲೇಂದ್ರ ಬಾಬು.
.
ಮತ್ತೊಬ್ಬ ನಿರ್ಮಾಪಕ ಕಿಶೋರ್ ಎಂ ಕೆ ಮಧುಗಿರಿ ಅವರು ಉತ್ತಮ ಚಿತ್ರ ನಿರ್ಮಾಣ ಮಾಡಿದ್ದೇವೆ ನೋಡಿ ಹಾರೈಸಿ ಎಂದರು.

ಈ ಚಿತ್ರದಲ್ಲಿ ನನ್ನದು ವಿಭಿನ್ನ ಪಾತ್ರ. ಕಾಮಿಡಿ ತುಂಬಾ ಇರುತ್ತದೆ. ಇಡೀ ಸಿನಿಮಾ ನನ್ನೊಬ್ಬ‌ನಿಂದಲೇ ನಗಿಸುವುದು ಕಷ್ಟ.. ನನ್ನ ಸ್ನೇಹಿತರ ಪಾತ್ರದಲ್ಲಿ ಪವನ್ ಕುಮಾರ್ ಹಾಗೂ ವಿಜಯ್ ಚೆಂಡೂರ್ ನಟಿಸಿದ್ದು, ಮೂವರು ಸೇರಿ ಉತ್ತಮ ಮನೋರಂಜನೆ ನೀಡುತ್ತೇವೆ. ನನ್ನ ಹಿಂದಿನ ಚಿತ್ರಗಳಿಗೆ ನೀವು ನೀಡಿರುವ ಪ್ರೋತ್ಸಾಹಕ್ಕೆ ನಾನು ಆಭಾರಿ. ಈ ಚಿತ್ರಕ್ಕೂ ನಿಮ್ಮ ಬೆಂಬಲವಿರಲಿ ಎಂದರು ನಾಯಕ ಸುಮಂತ್ ಶೈಲೇಂದ್ರ.

ಚಿತ್ರದಲ್ಲಿ ಅಭಿನಯಿಸಿರುವ ರೂಪೇಶ್ ಶೆಟ್ಟಿ, ಕವಿತಾ ಗೌಡ, ಪವನ್ ಕುಮಾರ್, ವಿಜಯ್ ಚಂಡೂರ್, ಸಂಗೀತ ನಿರ್ದೇಶಕ ಹಿತನ್ ಹಾಸನ್ ಹಾಗೂ ಕಾರ್ಯಕಾರಿ ನಿರ್ಮಾಪಕ ಜನಾರ್ದನ್ ಚಿತ್ರದ ಕುರಿತು ಮಾತನಾಡಿದರು.

ದೇವ್ ರಂಗಭೂಮಿ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿರುವ ಈ ಚಿತ್ರಕ್ಕೆ ಕೆ.ಎಸ್.ಚಂದ್ರಶೇಖರ್ ಅವರ ಛಾಯಾಗ್ರಹಣವಿದೆ. ರವಿಚಂದ್ರನ್ ಸಂಕಲನ, ಪ್ರಕಾಶ್ ಪುಟ್ಟಸ್ವಾಮಿ ಕಲಾ ನಿರ್ದೇಶನ ಹಾಗೂ ಥ್ರಿಲ್ಲರ್ ಮಂಜು ಅವರ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ.
ಸುಮಂತ್ ಶೈಲೇಂದ್ರ ನಾಯಕರಾಗಿ ನಟಿಸಿರುವ ಈ ಚಿತ್ರದ ತಾರಾಬಳಗದಲ್ಲಿ ಕವಿತಾ ಗೌಡ, ಭಾವನ ಮೆನನ್, ರೂಪೇಶ್ ಶೆಟ್ಟಿ, ಪವನ್ ಕುಮಾರ್, ವಿಜಯ್ ಚೆಂಡೂರ್, ಅಚ್ಯುತ ಕುಮಾರ್, ವಿ.ಮನೋಹರ್, ಕೆ.ಮಂಜು, ಕಡ್ಡಿಪುಡಿ ಚಂದ್ರು, ಪದ್ಮಾ ವಾಸಂತಿ, ಶ್ರೀನಿವಾಸಪ್ರಭು, ಗೋವಿಂದೇ ಗೌಡ, ಯಮುನ ಶ್ರೀನಿಧಿ ಮುಂತಾದವರಿದ್ದಾರೆ.

Must Read

spot_img
Share via
Copy link
Powered by Social Snap