HomeMusicಗೋಲ್ಡನ್ ಸ್ಟಾರ್ ಗಣೇಶ್ ಸಹೋದರ ಕೃಷ್ಣ ಮಹೇಶ್ ನಟನೆಯ ಮಹಾ ರೌದ್ರಂ ಸಿನಿಮಾದ ಆಡಿಯೋ ಬಿಡುಗಡೆ...

ಗೋಲ್ಡನ್ ಸ್ಟಾರ್ ಗಣೇಶ್ ಸಹೋದರ ಕೃಷ್ಣ ಮಹೇಶ್ ನಟನೆಯ ಮಹಾ ರೌದ್ರಂ ಸಿನಿಮಾದ ಆಡಿಯೋ ಬಿಡುಗಡೆ ಸಮಾರಂಭ

ಇತ್ತೀಚೆಗಷ್ಟೇ ರೇಣುಕಾಂಬ ಸ್ಟುಡಿಯೋದಲ್ಲಿ ನಡೆಯಿತು. ನಿರ್ಮಾಪಕರಾದ ಚಿನ್ನೇಗೌಡ್ರು, ಬಾಮಾ ಹರೀಶ್, ಬಾಮಾ ಗಿರೀಶ್, ಮೈಸೂರು ರಮಾನಂದ ಸೇರಿದಂತೆ ಇಡೀ ಮಹಾ ರೌದ್ರಂ ಚಿತ್ರತಂಡ ಕಾರ್ಯಕ್ರಮದಲ್ಲಿ ಭಾಗಿಯಾಗಿತ್ತು.

ಆಡಿಯೋ ಬಿಡುಗಡೆ ಬಳಿಕ ಮಾತಾನಾಡಿದ ಕೃಷ್ಣ ಮಹೇಶ್, ಇದು ಕಂಪ್ಲೀಟ್ ಆಕ್ಷನ್ ಸಿನಿಮಾ, ಫ್ಯಾಮಿಲಿ ಕುಳಿತು ನೋಡುವ ಸಿನಿಮಾ, ಇಡೀ ತಂಡ ಸಿನಿಮಾಗಾಗಿ ಸಾಕಷ್ಟು ಶ್ರಮಿಸಿದೆ. ಪ್ರತಿಯೊಬ್ಬರು ಸಿನಿಮಾ ನೋಡಿ ಆಶೀರ್ವಾದ ಮಾಡಿ ಎಂದು ಹೇಳಿದರು. ಹಿರಿಯ ನಟರಾದ ಮೈಸೂರು ರಮಾನಂದ, ಅಣ್ಣ ಗೋಲ್ಡನ್ ಸ್ಟಾರ್ ತಮ್ಮ ಡೈಮಂಡ್ ಸ್ಟಾರ್ ಅಂತಾ ಗಣೇಶ್ ಮತ್ತು ಮಹೇಶ್ ಅವರನ್ನು ಹಾಡಿ ಹೊಗಳಿದರು.

ಗೋಲ್ಡನ್‌ ಸ್ಟಾರ್‌ ಗಣೇಶ್‌ ಸಹೋದರ ಕೃಷ್ಣ ಮಹೇಶ್‌ ನಟನೆಯ ಮಹಾ ರೌದ್ರಂ ಸಿನಿಮಾ ಬಿಡುಗಡೆಗೆ ಸಜ್ಜಾಗಿದ್ದು, ಇದೇ ಫೆಬ್ರವರಿ 11ರಂದು ರಾಜ್ಯಾದ್ಯಂತ ಸಿನಿಮಾ ತೆರೆಗಪ್ಪಳಿಸಲಿದೆ. ಡಾ.ಆರ್.ಎಂ.ಸುನೀಲ್ ಕುಮಾರ್ ನಿರ್ದೇಶನದ ಮಹಾರೌದ್ರಂ ಸಿನಿಮಾಗೆ ವಂಶಿ ಸುನೀಲ್ ಕುಮಾರ್ ಬಂಡವಾಳ ಹಾಕಿದ್ದು, ಕೃಷ್ಣ ಮಹೇಶ್ ನಾಯಕ, ಪೂರ್ಣಿಮ ನಾಯಕಿ ಆಗಿ ನಟಿಸಿದ್ದಾರೆ. ಉಳಿದಂತೆ ಶೋಭರಾಜ್, ರವಿ ಕಾಳೆ, ಕರಿ ಸುಬ್ಬು, ಮನೋಜ್ ಮಿಶ್ರ, ಪದ್ಮಿನಿ ಪ್ರಕಾಶ್ ಸೇರಿದಂತೆ ದೊಡ್ಡ ತಾರಾಬಳಗ ಸಿನಿಮಾದಲ್ಲಿ. ಇನ್ನು ಸಿನಿಮಾಗೆ ಆದಿತ್ಯ ಸಿಂಗ್ ಆಶಿಷ್ ಸಂಗೀತ ನಿರ್ದೇಶನ ಮಾಡಿದ್ದು, ಸೋನು ನಿಗಮ್, ಅರ್ಜಿತ್ ಸಿಂಗ್, ಶ್ರೇಯಾ ಗೋಷಾಲ್ ರ ಮಾಧುರ್ಯದ ಕಂಠದಿಂದ ಹಾಡುಗಳು ಮೂಡಿಬಂದಿವೆ. ಸೂರ್ಯಕಾಂತ್ ಕ್ಯಾಮೆರಾ ಕೈಚಳ, ಎಂ. ಪ್ರಕಾಶ್ ಎಡಿಟಿಂಗ್ ಸಿನಿಮಾದಲ್ಲಿರಲಿದೆ.

Must Read

spot_img
Share via
Copy link
Powered by Social Snap