HomeNewsಭಾರಿ ಸದ್ದು ಮಾಡುತ್ತಿದ್ದೆ "ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ" ಚಿತ್ರದ ಟ್ರೇಲರ್ .

ಭಾರಿ ಸದ್ದು ಮಾಡುತ್ತಿದ್ದೆ “ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ” ಚಿತ್ರದ ಟ್ರೇಲರ್ .

ಚಿತ್ರ ಬಿಡುಗಡೆಗೂ ಮುನ್ನ ಹೊರಬರುವ ಟ್ರೇಲರ್ ನೋಡಿದ ಕೂಡಲೆ, ಅಭಿಮಾನಿಗಳಲ್ಲಿ ಸಿನಿಮಾ ನೋಡುವ ಕಾತುರ ಇನ್ನಷ್ಟು ಹೆಚ್ಚುತ್ತದೆ.

ತಾರಾ ಜೋಡಿ ದಿಗಂತ್ – ಐಂದ್ರತ ರೆ ನಾಯಕ- ನಾಯಕಿಯಾಗಿ ನಟಿಸಿರುವ “ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ” ಚಿತ್ರದ ಟ್ರೇಲರ್ ಸಹ ಇತ್ತೀಚೆಗೆ ಲಹರಿ ಮ್ಯೂಸಿಕ್ ಯೂಟ್ಯೂಬ್ ಚಾನಲ್ ಮೂಲಕ ಬಿಡುಗಡೆಯಾಗಿದ್ದು, ಅಧಿಕ ಸಂಖ್ಯೆಯಲ್ಲಿ ವೀಕ್ಷಣೆಯಾಗುತ್ತಿದೆ. ಟ್ರೇಲರ್ ಗೆ ಪ್ರಶಂಸೆ ಸಿಕ್ಕಿದೆ. ಇದೇ ಏಪ್ರಿಲ್ ಕೊನೆಯಲ್ಲಿ ಚಿತ್ರ ತೆರೆಗೆ ಬರುತ್ತಿದ್ದು, ಚಿತ್ರ ಬಿಡುಗಡೆಗೆ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.

ಸಿಲ್ಕ್ ಮಂಜು ನಿರ್ಮಿಸಿರುವ ಈ ಚಿತ್ರವನ್ನು ವಿನಾಯಕ ಕೋಡ್ಸರ ನಿರ್ದೇಶಿಸಿದ್ದಾರೆ. ರವೀಂದ್ರ ಜೋಶಿ ಕಾರ್ಯಕಾರಿ ನಿರ್ಮಾಪಕರಾಗಿ ಕಾರ್ಯ ನಿರ್ವಹಿಸಿದ್ದಾರೆ.

ಪ್ರಜ್ವಲ್ ಪೈ ಸಂಗೀತ ನಿರ್ದೇಶನ ಹಾಗೂ ನಂದಕಿಶೋರ್ ಛಾಯಾಗ್ರಹಣವಿರುವ ಈ ಚಿತ್ರದ ಮುಖ್ಯಪಾತ್ರದಲ್ಲಿ ದಿಗಂತ್, ಐಂದ್ರಿತ ರೆ, ರಜನಿ ರಾಘವನ್ ನಟಿಸಿದ್ದಾರೆ.

Must Read

spot_img
Share via
Copy link
Powered by Social Snap