HomeNewsಕನ್ನಡದ ವ್ಯಾಕರಣ ಹೇಳಿಕೊಡುವ ಈ ಡಿಫರೆಂಟ್ ಗ್ಯಾಂಗ್ ಸ್ಟರ್.. ಸವರ್ಣದೀರ್ಘ ಸಂಧಿ ಚಿತ್ರದ ರಿವ್ಯೂ

ಕನ್ನಡದ ವ್ಯಾಕರಣ ಹೇಳಿಕೊಡುವ ಈ ಡಿಫರೆಂಟ್ ಗ್ಯಾಂಗ್ ಸ್ಟರ್.. ಸವರ್ಣದೀರ್ಘ ಸಂಧಿ ಚಿತ್ರದ ರಿವ್ಯೂ

ಕನ್ನಡ ಬೀಟ್ಸ್ ವಿಮರ್ಶೆ ಮತ್ತು ರೇಟಿಂಗ್

ಸಿನೆಮಾ: ಸವರ್ಣದೀರ್ಘ ಸಂಧಿ

ತಾರಾಗಣ:ವಿರೇಂದ್ರ ಶೆಟ್ಟಿ,ಕೃಷ್ಣ ಇನ್ನಿತರರು

ರೇಟಿಂಗ್: 4/5

ನಿರ್ದೇಶನ:ವೀರೇಂದ್ರ ಶೆಟ್ಟಿ

ನಿರ್ಮಾಪಕರು:ವೀರೇಂದ್ರ ಶೆಟ್ಟಿ,ಲುಷಿಂಗ್ಟನ್ ಥಾಮಸ್, ಹೇಮಂತ್ ಕುಮಾರ್ ಪಿವಿಆರ್ 

ಸಂಗೀತ:ಮನೋಮೂರ್ತಿ

‘ಸವರ್ಣದೀರ್ಘ ಸಂಧಿ’ ಇದು ನಕ್ಕು ನಗಿಸೋ ಸಿನೆಮಾ…!

ಸಿನಿಪ್ರಿಯರ ಅಪ್ಪುಗೆಗೆ ಪಾತ್ರವಾದ ‘ಸವರ್ಣದೀರ್ಘ ಸಂಧಿ’

ಶುಕ್ರವಾರ ಇದು ಸಿನಿರಸಿಕರ ಪಾಲಿನ ಹಬ್ಬದ ದಿನ.ಯಾಕಂದ್ರೆ ಶುಕ್ರವಾರ ಬಂತು ಅಂದ್ರೆ ಸಾಕು,ಒಂದಿಷ್ಟು ಸಿನಿಮಾಗಳು ಥಿಯೇಟರ್ ಗೆ ಎಂಟ್ರಿಕೊಟ್ಟು,ವೀಕೆಂಡ್ ನ ಮಸ್ತಿ ಮಾಡುವಂತೆ ಮಾಡ್ತವೆ.ಅಂತೆಯೇ ಇಂದು,ಟೈಟಲ್ ನಲ್ಲೇ ಕ್ಯೂರಿಯಾಸಿಟಿ ಮೂಡಿಸಿದ್ದ ಸಿನಿಮಾ ಸವರ್ಣದೀರ್ಘ ಸಂಧಿ ರಾಜ್ಯಾದಾದ್ಯಂತ ರಿಲೀಸ್ ಆಗಿ ಸಾಕಷ್ಟು ವಿಚಾರಗಳಿಂದ ಸುದ್ದಿ ಮಾಡ್ತಿದೆ. ಟ್ರೈಲರ್ ಹಾಗೂ ಹಾಡುಗಳ ಮೂಲಕ ಕುತೂಹಲ ಕೆರಳಿಸಿದ್ದ ಈ ಚಿತ್ರ ವನ್ನ ಅಭಿಮಾನಿಗಳು ಪ್ರೀತಿಯಿಂದ ಒಪ್ಪಿದ್ದಾರೆ. ಸವರ್ಣದೀರ್ಘ ಸಂಧಿ ಅನ್ನೋ ವ್ಯಾಕರಣದ ಮಂತ್ರವೇ ಒಂಥರಾ ಜಾದುವನ್ನ ಮಾಡಿದೆ ಅನ್ನಬಹುದು.


ತುಳು ಚಿತ್ರರಂಗದ ಸೂಪರ್ ಹಿಟ್ ನಿರ್ದೇಶಕ ವೀರೇಂದ್ರ ಶೆಟ್ಟಿ ಆ್ಯಕ್ಷನ್ ಕಟ್ ಹೇಳಿರೋ ಈ ಸಿನಿಮಾದಲ್ಲಿ ತುಂಬಾ ಕ್ಲಿಷ್ಟವೆನಿಸೋ ಕಥೆಯೇನಿಲ್ಲವಾದರೂ ಸಾಧಾರಣ ಕಥೆಯನ್ನಿಟ್ಟುಕೊಂಡು ಅದಕ್ಕೆ ಅದ್ಭುತ ಸಿನಿಮಾ ವ್ಯಾಕರಣ, ಬೇಕಾದಲ್ಲಿ ಹಾಸ್ಯ,ಅಲ್ಲಲ್ಲಿ ರಮಿಸೋ ಕವಿತೆಯ ಜಾಲಬಿಟ್ಟು, ಅಂದದ ಸಾಹಿತ್ಯ ನೀಡೋ ಮೂಲಕ ಈ ತಲೆಮಾರಿಗೆ ಭಾಷೆಯ ಅರಿವು ಮೂಡಿಸೋ, ಪಾಸಿಟೀವ್ ದರ್ಪಣವಾಗಿದ್ದಾರೆ ಎನ್ನಬಹುದು.


ನಾಯಕಿ ಕೃಷ್ಣ ರಿಗೆ ಇದು ಮೊದಲ ಸಿನಿಮಾವಾದರೂ ಸಹ ಅನುಭವಿ ಅನ್ನುವಷ್ಟು ಭಾವಾಭಿನಯವನ್ನ ಮಾಡಿದ್ದಾರೆ.. ಈ ಸಿನಿಮಾದಲ್ಲಿ ನಾಯಕ ಗ್ಯಾಂಗ್‍ಸ್ಟರ್. ಹೀಗೆಂದಾಕ್ಷಣ ಮಚ್ಚ ಲಾಂಗುಗಳ ಆರ್ಭಟ, ರಕ್ತದೋಕುಳಿಗಳೆಲ್ಲ ಇಲ್ಲ ಅಂದುಕೊಂಡರದು ತಪ್ಪು. ಯಾಕೆಂದರೆ ಇಲ್ಲಿರೋ ಗ್ಯಾಂಗ್‍ಸ್ಟರ್ ನಗುವಿನ ಹೊಳೆ ಹರಿಸುತ್ತಾನೆ. ಭೂಗತ ಜಗತ್ತೆಂದರೆ ಅಕ್ಷರ, ಸಾಹಿತ್ಯ ಮುಂತಾದವುಗಳ ಪರಿಚಯ ಇಲ್ಲದವರ ಲೋಕ ಎಂಬ ನಂಬಿಕೆ ಇದೆ. ಆದರೆ ಇಲ್ಲಿನ ಗ್ಯಾಂಗ್‍ಸ್ಟರ್ ವ್ಯಾಕರಣದಲ್ಲಿ ಎಂಥವರೂ ಅದುರಿ ಬಿಡುವಷ್ಟು ಪಾಂಡಿತ್ಯ ಹೊಂದಿರುತ್ತಾನೆ. ಚಿತ್ರಕ್ಕೆ ಲೋಕನಾಥ್ ಛಾಯಾಗ್ರಹಣ, ಸಂಕೇತ್ ಶಿವಪ್ಪ ಸಂಕಲನವಿದ್ದು

ಮನೋಮೂರ್ತಿಯವರ ಸಂಗೀತ ಮೋಡಿಮಾಡತ್ತೆ. ಚಿತ್ರದ ಹಾಡುಗಳು ಸಹ ಗುನುಗುವಂತೆ ಮಾಡುತ್ತವೆ.. ಟೆಕ್ನಿಕಲ್ ಆಗಿ ನೋಡೋದಾದ್ರೆ ಸಿನಿಮಾಗೆ ಎಲ್ಲೂ ಮೋಸಮಾಡಿಲ್ಲ.ಇನ್ನುಳಿದಂತೆ , ಹಾಸ್ಯ , ಪ್ರೀತಿ , ಭಾಷೆಯ ಮಿತಿ, ಎಲ್ಲವೂ ಹಿಡಿತದಿಂದ ಸಾಗಿದ್ದು ಥಿಯೇಟರ್ ನಲ್ಲಿ ಕೂತ ಪ್ರೇಕ್ಷಕನ ಗಮನವನ್ನ ಅಲ್ಲೇ ಕೇಂದ್ರಿಕರಿಸುವಂತೆ ಮಾಡತ್ತೆ.ಹಾಗಾಗಿ 5 ಸ್ಟಾರ್ ಗೆ 4 ಸ್ಟಾರ್ ಗಳನ್ನ ಮನಸಾರೆ ಸವರ್ಣದೀರ್ಘಸಂಧಿ ಗೆ ನಾವು ಕೊಡ್ತೇವೆ.ನೀವೂ ಸಹ ಚಿತ್ರವನ್ನ ಮರೆಯದೇ ನೋಡಿ ಯಾಕಂದ್ರೆ ದೀಪಾವಳಿ ಹಬ್ಬದೂಟ ಸಿಗೋದು ಪಕ್ಕಾ. ಒಟ್ಟಾರೆಯಾಗಿ ಹೇಳೋದಾದ್ರೆ ಎಲ್ಲಾ ವಿಧದಲ್ಲೂ ಸಿನಿಪ್ರಿಯರ ಮನ ಸಂಧಿಸೋ ಈ ಸವರ್ಣದೀರ್ಘ ಸಂಧಿ ನಾವು ಕೊಟ್ಟ ಟಿಕೇಟ್ ಕಾಸಿಗೆ ಮೋಸ ಮಾಡದೇ,ಫುಲ್ ಎಂಟರ್ಟೈನ್ ಮಾಡೋದಂತೂ ನಿಜ.

Must Read

spot_img

Deprecated: preg_replace(): Passing null to parameter #3 ($subject) of type array|string is deprecated in /home/u452565381/domains/kannadabeatz.com/public_html/wp-includes/kses.php on line 1805

Deprecated: preg_replace(): Passing null to parameter #3 ($subject) of type array|string is deprecated in /home/u452565381/domains/kannadabeatz.com/public_html/wp-includes/kses.php on line 1805
Share via
Copy link
Powered by Social Snap