HomeNewsಬೆಂಗಳೂರಿನಲ್ಲಿ ‘ಕಡುವ’ ಪ್ರೀ-ರಿಲೀಸ್ ಇವೆಂಟ್…ಜೂನ್ 30ಕ್ಕೆ ರಿಲೀಸ್ ಆಗ್ತಿದೆ ಪೃಥ್ವಿರಾಜ್ ಸುಕುಮಾರನ್ ನಟನೆಯ ಪ್ಯಾನ್ ಇಂಡಿಯಾ...

ಬೆಂಗಳೂರಿನಲ್ಲಿ ‘ಕಡುವ’ ಪ್ರೀ-ರಿಲೀಸ್ ಇವೆಂಟ್…ಜೂನ್ 30ಕ್ಕೆ ರಿಲೀಸ್ ಆಗ್ತಿದೆ ಪೃಥ್ವಿರಾಜ್ ಸುಕುಮಾರನ್ ನಟನೆಯ ಪ್ಯಾನ್ ಇಂಡಿಯಾ ಚಿತ್ರ ಕಡುವ

ಮಾಲಯಾಳಂ ಚಿತ್ರರಂಗದಲ್ಲಿ ತಮ್ಮದೇ ಅಮೋಘ ಅಭಿನಯದ ಮೂಲಕ, ತಮ್ಮ ಸ್ಟೈಲ್ ನಲ್ಲಿ ಸಿನಿಮಾ ನಿರ್ದೇಶನ ಮಾಡುವ ಮೂಲಕ ಖ್ಯಾತಿ ಗಳಿಸಿರುವ ನಟ, ನಿರ್ಮಾಪಕ, ನಿರ್ದೇಶಕ ಹಾಗೂ ವಿತರಕ ಪೃಥ್ವಿರಾಜ್ ಸುಕುಮಾರನ್ ಲೂಸಿಫರ್, ಜನಗಣಮನ, ಬ್ರೋ ಡ್ಯಾಡಿ ಸೂಪರ್ ಹಿಟ್ ಬಳಿಕ ಮತ್ತೊಂದು ಸಿನಿಮಾ ಮೂಲಕ ಪ್ರೇಕ್ಷಕರ ಮುಂದೆ ಹಾಜರಾಗಲು ಸಜ್ಜಾಗಿದ್ದಾರೆ. ಪೃಥ್ವಿರಾಜ್ ನಟನೆಯ ಕಡುವ ರಿಲೀಸ್ ಹೊಸ್ತಿಲಿನಲ್ಲಿ ನಿಂತಿದೆ. ಇದೇ ಜೂನ್ 30ರಂದು ಪಂಚ ಭಾಷೆಯಲ್ಲಿ ತೆರೆಗಪ್ಪಳಿಸ್ತಿದೆ. ಹೀಗಾಗಿ ಚಿತ್ರತಂಡ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ.

ಪೃಥ್ವಿರಾಜ್ಗೆ ಜೋಡಿಯಾಗಿ ಸಂಯುಕ್ತಾ ಮೆನನ್ ಕಾಣಿಸಿಕೊಂಡಿದ್ದಾರೆ. ಬಾಲಿವುಡ್ ನಟ ವಿವೇಕ್ ಓಬೆರಾಯ್ ಪೊಲೀಸ್ ಆಫೀಸರ್ ಆಗಿ ನಟಿಸಿದ್ದಾರೆ. ಶಾಜಿ ಕೈಲಾಸ್ ನಿರ್ದೇಶನದಲ್ಲಿ ಮೂಡಿ ಬಂದಿರುವ ಕಡುವ ಟೀಸರ್ ಈಗಾಗ್ಲೇ ಕುತೂಹಲ ಹುಟ್ಟಿಸಿದೆ. ಕಡುವಕ್ಕುಣ್ಣೇಲ್ ಗುರುವಚ್ಚನ್ ಎಂಬ ವ್ಯಕ್ತಿಯ ನೈಜ ಕತೆಯನ್ನಾಧರಿಸಿಕಡುವ ಸಿನಿಮಾದ ಪ್ರಚಾರಕ್ಕಾಗಿ ನಾಯಕ ಪೃಥ್ವಿರಾಜ್ ಸುಕುಮಾರನ್, ನಾಯಕಿ ಸಂಯುಕ್ತಾ ಮೆನನ್ ಬೆಂಗಳೂರಿಗೆ ಆಗಮಿಸಿದ್ದರು.

ಪೃಥ್ವಿರಾಜ್ ಸುಕುಮಾರನ್ ಮಾತಾನಾಡಿ, ಕಳೆದ 6 ತಿಂಗಳಿಂದ ನಾನು ಅನಧಿಕೃತವಾಗಿ ಕೇರಳದಲ್ಲಿ ಕನ್ನಡ ಸಿನಿಮಾದ ರಾಯಭಾರಿಯಾಗಿರುವೆ.. ಪೃಥ್ವಿರಾಜ್ ಪ್ರೊಡಕ್ಷನ್ ನಡಿ ವಿತರಣೆ ಮಾಡಿದ ಕೆಜಿಎಫ್, 777 ಚಾರ್ಲಿ ಎರಡು ಸಿನಿಮಾಗಳು ಕೇರಳಲ್ಲಿ ಒಳ್ಳೆ ರೆಸ್ಪಾನ್ಸ್ ಪಡೆದುಕೊಂಡಿವೆ. ಒಳ್ಳೆ ದುಡ್ಡು ಮಾಡಿದ್ದೇನೆ. ಕಡುವ ನನಗೆ ತುಂಬಾ ವಿಶೇಷವಾದ ಸಿನಿಮಾ . ಜನ ಗಣ ಮನ ಸಿನಿಮಾವನ್ನು ಬೆಂಗಳೂರಿನಲ್ಲಿ ಹೆಚ್ಚು ಜನರು ನೋಡಿದ್ದಾರೆ. ನನ್ನ ಈ ಹಿಂದಿನ ಸಿನಿಮಾಗಳಿಗೆ ಕರ್ನಾಟಕದಲ್ಲಿ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿವೆ. ಇಂದು ಭಾರತದಾದ್ಯಂತ ನಾವು ನಮ್ಮ ಸಿನಿಮಾಗಳನ್ನು ರಿಲೀಸ್ ಮಾಡುತ್ತಿದ್ದೇವೆ. ‘ಬಾಹುಬಲಿ’ ಮೂಲಕ ಪ್ಯಾನ್ ಇಂಡಿಯಾ ಚಿತ್ರ ಹೆಚ್ಚು ಪ್ರಚಲಿತಕ್ಕೆ ಬಂತು. ಅದನ್ನು ಕೆಜಿಎಫ್ ಸಿನಿಮಾದ ಪ್ರಶಾಂತ್ ನೀಲ್ , ಯಶ್ ಇನ್ನೊಂದು ಹಂತಕ್ಕೆ ತೆಗೆದುಕೊಂಡು ಹೋದರು. ಹೀಗಾಗಿ ಇಂದು ಚಿತ್ರರಂಗ ಒಂದಾಗಿದೆ, ದೊಡ್ಡದಾಗಿದೆ. ನಾನು ಕಡುವ ಸಿನಿಮಾವನ್ನು ವ್ಯವಹಾರ, ಉದ್ಯಮದ ವಿಚಾರವಾಗಿ 5 ಭಾಷೆಯಲ್ಲಿ ರಿಲೀಸ್ ಮಾಡುತ್ತಿರುವುದು ಒಂದು ವಿಚಾರವಾದರೆ ಇನ್ನೊಂದು ಜನರಿಗೆ ತಲುಪಬೇಕು.

ಸಂಯುಕ್ತ ಮೆನನ್ ಮಾತಾನಾಡಿ, ಇದೇ ಜೂನ್ 30ಕ್ಕೆ ಸಿನಿಮಾ ರಿಲೀಸ್ ಆಗ್ತಿದೆ. ಪೃಥ್ವಿರಾಜ್ ಸರ್ ಜೊತೆ ಕೆಲಸ ಮಾಡಿದ್ದು ಖುಷಿ ಕೊಟ್ಟಿದೆ. ಭಾರತೀಯ ಚಿತ್ರರಂಗದಲ್ಲಿ ಅವರೊಬ್ಬರು ಅದ್ಭುತ ನಟ. ಎಂಟರ್ ಟ್ರೈನ್ಮೆಂಟ್, ಡ್ರಾಮಾ, ಥ್ರಿಲ್ಲರ್ ಎಲ್ಲವೂ ಸಿನಿಮಾದಲ್ಲಿದೆ ಎಂದರು.

Must Read

spot_img
Share via
Copy link
Powered by Social Snap