ಜೀ5 ಒಟಿಟಿಯಲ್ಲಿ ಏಕ್ ಲವ್ ಯಾ ಧಮಾಕಾ…ಜಸ್ಟ್ 7 ದಿನದಲ್ಲಿ 5 ಮಿಲಿಯನ್ಸ್ ಸ್ಟ್ರೀಮಿಂಗ್

ಜೋಗಿ ಪ್ರೇಮ್ ನಿರ್ದೇಶನದ ಏಕ್ ಲವ್ ಯಾ ಸಿನಿಮಾ ಜೀ5 ಒಟಿಟಿಯಲ್ಲಿ ಧೂಳ್ ಎಬ್ಬಿಸ್ತಿದೆ. ಮ್ಯೂಸಿಕಲ್ ಹಿಟ್ ಮೂವೀ ಏಕ್ ಲವ್ ಯಾಗೆ ಒಟಿಟಿಯಲ್ಲಿ ಭರ್ಜರಿ ರೆಸ್ಪಾನ್ಸ್ ಸಿಕ್ತಿದೆ. ಏಪ್ರಿಲ್ 8ರಂದು ಜೀ5ಗೆ ಲಗ್ಗೆ ಇಟ್ಟ ಈ ಸಿನಿಮಾ ಜಸ್ಟ್ ಏಳು ದಿನದಲ್ಲಿ 5 ಮಿಲಿಯನ್ಸ್ ಸ್ಟ್ರೀಮಿಂಗ್ ಕಂಡು ದಾಖಲೆ ಬರೆದಿದೆ.

ರಕ್ಷಿತಾ ಪ್ರೇಮ್ ಸಹೋದರ, ಹೊಸಪ್ರತಿಭೆ ರಾಣಾ ನಾಯಕನಾಗಿ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದ ಏಕ್ ಲವ್ ಯಾ ಸಿನಿಮಾ‌‌ ಕಳೆದ ಫೆಬ್ರವರಿ 24ರಂದು ಅದ್ಧೂರಿಯಾಗಿ ತೆರೆಗಪ್ಪಳಿಸಿತ್ತು. ಬಾಕ್ಸ್ ಆಫೀಸ್‌ನಲ್ಲಿ ಸೌಂಡ್ ಮಾಡಿದ್ದ ಏಕ್ ಲವ್ ಯಾ ಸಿನಿಮಾದಲ್ಲಿ ಕೊಡಗಿನ ಕುವರಿ ರೀಷ್ಮಾ ನಾಣಯ್ಯ ಹಾಗೂ ರಚಿತಾ ರಾಮ್ ರಾಣಾಗೆ ಜೋಡಿಯಾಗಿ ನಟಿಸಿದ್ದರು. ಪ್ರೀತಿ ಜೊತೆ ಒಂದೊಳ್ಳೆ ಸಂದೇಶ ನೀಡಿದ್ದ ಮ್ಯೂಸಿಕಲ್ ಹಿಟ್ ಸಿನಿಮಾ ಏಕ್ ಲವ್ ಯಾ ಸಿನಿಮಾ ಜೀ5 ಒಟಿಟಿಯಲ್ಲಿ ಕಮಾಲ್ ಮಾಡ್ತಿದೆ.

ಚರಣ್ ರಾಜ್, ಶಶಿಕುಮಾರ್, ಸೂರಜ್, ‘ಶಿಷ್ಯ’ ದೀಪಕ್ ಸೇರಿದಂತೆ ದೊಡ್ಡ ತಾರಾ ಬಳಗ ನಟಿಸಿದ್ದ ಏಕ್ ಲವ್ ಯಾ ಸಿನಿಮಾವನ್ನು ರಕ್ಷಿತಾ ತಮ್ಮದೇ ರಕ್ಷಿತಾ ಫಿಲ್ಮಂ ಫ್ಯಾಕ್ಟರಿ ಬ್ಯಾನರ್ ನಡಿ ನಿರ್ಮಾಣ ಮಾಡಿದ್ದರು. ಅರ್ಜುನ್ ಜನ್ಯ ಸಂಗೀತ, ಮಹೇನ್ ಸಿಂಹ ಕ್ಯಾಮೆರಾ ಕೈಚಳಕ ಏಕ್ ಲವ್ ಯಾ ಸಿನಿಮಾಕ್ಕಿದೆ.

Must Read

spot_img
Share via
Copy link
Powered by Social Snap