HomeReviewsಎಲ್ಲರ ಮನಗೆದ್ದ "ಏಕ್ ಲವ್ ಯಾ"

ಎಲ್ಲರ ಮನಗೆದ್ದ “ಏಕ್ ಲವ್ ಯಾ”

ಬಹುನಿರೀಕ್ಷಿತ ‘ಜೋಗಿ’ ಪ್ರೇಮ್ ನಿರ್ದೇಶನದ ‘ಏಕ್ ಲವ್ ಯಾ’ ಇಂದು ರಾಜ್ಯಾಂದ್ಯ0ತ ಬಿಡುಗಡೆಯಾಗಿದೆ. ರಕ್ಷಿತಾ ಪ್ರೇಮ್ ನಿರ್ಮಾಣದ ಈ ಸಿನಿಮಾದಲ್ಲಿ ಅವರ ಸಹೋದರ ರಾಣ ಹೀರೋ ಆಗಿ ಬಡ್ತಿ ಪಡೆಯುವುದರ ಮೂಲಕ ಚಂದನವನಕ್ಕೆ ಇನ್ನೊಬ್ಬ ಸ್ಟಾರ್ ನಟನನ್ನು ಕರೆತರುವಲ್ಲಿ ಪ್ರೇಮ್ ಭಾಗಶಃ ಯಶಸ್ವಿಯಾಗಿದ್ದಾರೆ. ಈ ಮೂಲಕ, `ತಾನು ಸ್ಟಾರ್ ನಟರಿಗಷ್ಟೇ ಸ್ಟಾರ್ ಡೈರೆಕ್ಟರ್ ಅಲ್ಲ, ಸ್ಟಾರ್ ನಟರನ್ನು ಸೃಷ್ಟಿಸಬಲ್ಲ ನಿರ್ದೇಶಕ ಅನ್ನುವುದನ್ನು ತಮ್ಮ ಕೆಲಸದ ಮೂಲಕ ಪ್ರೂವ್ ಮಾಡಿದ್ದಾರೆ.

ಹಾಗಿದ್ದರೆ ‘ಏಕ್ ಲವ್ ಯಾ’ದ ಅಸಲಿ ಕಹಾನಿ ಏನು? ಅಮರ್ (ರಾಣ) ಅವಿಧೇಯ ಬುದ್ದಿವಂತ ವಿಧ್ಯಾರ್ಥಿ! ಲಾ ಓದುತ್ತಿರುವ ಅಮರ್, ತನ್ನ ಅಮರ ಪ್ರೇಮ್ ಕಹಾನಿಯಿಂದಾಗಿ ಲಾ’ಜಿಕ್ ಇಟ್ಟುಕೊಂಡೇ ಎಣ್ಣೆ ಏರಿಸುವ ಆಸಾಮಿ. ಪುಲ್‌ಟೈಟ್ ಆಗಿ ಕಾಲೇಜಿಗೆ ಬರುವ ಅಮರ್, ಕಾಲೇಜ್‌ನ ಕಾರ್ಯಕ್ರಮ ಒಂದರಲ್ಲೇ, ಖ್ಯಾತ ಕ್ರಿಮಿನಲ್ ಲಾಯರ್ ವಿಶ್ವನಾಥ್ (ಚರಣ್ ರಾಜ್) ನೀಡುವ ಕಾನೂನಿನ ಸಮಸ್ಯೆಯೊಂದನ್ನು, ಎಣ್ಣೆ ಏಟಿನಿಂದ ತೊದಲುತ್ತಲೇ ಬಗೆಹರಿಸುವುದರ ಮೂಲಕ, ಅವರ ಶಿಷ್ಯನಾಗಿ ಭಡ್ತಿ ಪಡೆಯುತ್ತಾನೆ. ಸಿನಿಮಾ ಆರಂಭದಲ್ಲೇ, ನಿರ್ದೇಶಕ ಪ್ರೇಮ್.. ಅಮರ್‌ಗೆ ಯದ್ವಾ ತದ್ವಾ ಎಣ್ಣೆ ಕುಡಿಸಿದ್ದು ಯಾಕೆ? ಅವನ ಬಾಯಲ್ಲಿ ಪದೇ ಪದೇ ಪ್ರೇಯಸಿ ಅನಿತಾಳನ್ನು (ರೀಷ್ಮಾ ನಾಣಯ್ಯ)ಕೊಲೆ ಮಾಡ್ತೀನಿ’ ಎಂದು ಹೇಳಿಸಿರೋದು ಯಾಕೆ? ರಚಿತಾ ರಾಮ್ ಅವರ ಬಾಯಲ್ಲಿ ಪ್ರೇಕ್ಷಕ `ರಾಮಾ ರಾಮಾ..’ ಅನ್ನುವಷ್ಟು ಹೊಗೆ ಹೊರಹಾಕಿಸಿದ್ದೇಕೆ? ರಚಿತಾ-ರಾಣ ಮಧ್ಯೆ ಪ್ರೇಮ್ ಕಹಾನಿ ಇರಬಹುದೆಂದು ರಿಲೀಸ್‌ಗೂ ಮುನ್ನವೇ ಪ್ರೇಕ್ಷಕನ ತಲೆಯಲ್ಲಿ ಹುಳ ಬಿಟ್ಟೀದ್ದೇಕೆ? ಚಿತ್ರದ ಟೈಟಲ್ ಏಕೆ ‘ಏಕ್ ಲವ್ ಯಾ’ ಎಂದಿದೆ? … ಹೀಗೆ ಸಾಕಷ್ಟು ಪ್ರಶ್ನೆ ಮತ್ತು ಗೊಂದಲಗಳಿಗೆ ಪ್ರೇಮ್, ನೀಡುವ ಸಮರ್ಥನೆಯನ್ನು ತೆರೆಯಮೇಲೆ ನೋಡಿ ಅನುಭವಿಸಿವುದೇ ಒಂದು ವಿಭಿನ್ನ ಅನುಭವ.

ಪ್ರೇಮ್, ‘ಏಕ್ ಲವ್ ಯಾ’ ಚಿತ್ರದ ಕಥೆಯನ್ನು ಎರಡು ವಿಭಿನ್ನ ಪಾತ್ರಗಳ ಮೂಲಕ ನರೇಶನ್ ಮಾಡುತ್ತಾ ಹೋಗುತ್ತಾರೆ. ಅಮರ್ ಬದುಕಿನಲ್ಲಿ ನಡೆದ ಅಪರೂಪದ ಪ್ರೇಮ ಕಥೆಯನ್ನು ಫ್ಲಾಶ್‌ಬ್ಯಾಕ್‌ನ ಮೂಲಕ ತೋರಿಸುವ ಪರಿಯೇ ಡಿಫೆರೆಂಟ್ ಆಗಿದೆ. ಪ್ರೌಢಶಾಲೆ ವಿಧ್ಯಾರ್ಥಿ ಅಮರ್, ಆ ಪ್ರಾಯದಲ್ಲೇ ಪ್ರೀತಿಯಲ್ಲಿ ಪ್ರೌಢಿಮೆಯನ್ನು ಮೆರೆಯುವಾಗಿನ ಅವರ ನಟನೆ ನಿಜಕ್ಕೂ ಅಚ್ಚರಿ ಮೂಡಿಸುತ್ತದೆ. ಚಿತ್ರದಲ್ಲಿನ ದೃಶ್ಯ ವೈಭವನ್ನು ಹಿರಿತೆರೆಯಲ್ಲಿ ನೋಡುವುದೇ ಹಬ್ಬ. ಈ ಸಿನಿಮಾಗಾಗಿ ಅದ್ಭುತ ಲೊಕೇಶನ್ಗಳನ್ನು ಕಷ್ಟಪಟ್ಟು ಆಯ್ಕೆ ಮಾಡಿದ್ದ ಪ್ರೇಮ್ ಶ್ರಮಕ್ಕೆ, ಮಹೇಂದ್ರ ಸಿಂಹ ಅವರು ಛಾಯಾಗ್ರಹಣದ ಮೂಲಕ ಸಂಪೂರ್ಣ ನ್ಯಾಯ ಒದಗಿಸಿದ್ದಾರೆ. ಸದಾ ಮಂಜು ಮುಸುಕಿರುವ ಫ್ರೇಮ್‌ಗಳಲ್ಲಿ ಅರಳುವ ಪ್ರೇಮ್ ಕಥೆ ನಿಜಕ್ಕೂ ಆಪ್ತವೆನಿಸುತ್ತದೆ.

ಇನ್ನು ಸಂಗೀತದ ಬಗ್ಗೆ ಹೇಳುವುದಾದರೆ.. ‘ಏಕ್ ಲವ್ ಯಾ’ದ ಮೂಲಕ ಪ್ರೇಮ್ ತಮ್ಮ ಹಿಂದಿನ ಚಿತ್ರಗಳ ಛಾಯೆ ಸೋಂಕದoತೆ ಫ್ರೆಶ್ ಆದ ಸಂಗೀತ ಮತ್ತು ಹಿನ್ನಲೆ ಸಂಗೀತವನ್ನು ಅರ್ಜುನ್ ಜನ್ಯ ಅವರಿಂದ ತೆಗೆಸಿದ್ದಾರೆ. ಯೂಟ್ಯೂಬ್‌ನಲ್ಲಿ ರಿಲೀಸ್ ಆದ ಹಾಡುಗಳು ಥೀಯೇಟರ್‌ನಲ್ಲಿ ನೋಡಲು ಇನ್ನಷ್ಟು ಮುದ ನೀಡುತ್ತದೆ. ವಿಜಯ್ ಈಶ್ವರ್, ಶರಣ್‌ಕುಮಾರ್ ಗಜೇಂದ್ರಗಢ, ಮಂಜುನಾಥ್ ಮತ್ತು ಪ್ರೇಮ್ ಅವರ ಸಾಹಿತ್ಯ ಚಿತ್ರದ ಕತೆಗೆ ಪೂರಕವಾಗಿದೆ. ಇನ್ನು, ಶ್ರೀನಿವಾಸ್ ಅವರ `ಕತ್ತರಿ’ ಪ್ರಯೋಗ ಸಿನಿಮಾಕ್ಕೊಂದು ಓಘ ನೀಡಿದೆ.

ನಟನೆಯ ವಿಚಾರಕ್ಕೆ ಬರೋದಾರೆ.. ರಾಣ ಅವರು ಮೊದಲ ಸಿನಿಮಾದಲ್ಲೇ ತಾನೊಬ್ಬ ಉತ್ತಮ ನಟ ಅನ್ನೋದನ್ನು ಪ್ರತೀ ಫ್ರೇಮ್‌ನಲ್ಲೂ ನಿರೂಪಿಸಿದ್ದಾರೆ. ಮೊದಲ ಚಿತ್ರದಲ್ಲೇ ಅಚ್ಚರಿ ಮೂಡಿಸುವ ಈ ನಟನೆ ನೀಡಿರುವುದರ ಹಿಂದರಿರೋದು, ರಂಗಕರ್ಮಿ ಕೃಷ್ಣಮೂರ್ತಿ ಕವತ್ತಾರ್. ಕೃಷ್ಣಮೂರ್ತಿ ಕವತ್ತಾರ್ ಅವರ ಗರಡಿಯಲ್ಲಿ ಪಳಗಿರುವ ರಾಣಾಗೆ ಮುಂದಿನ ದಿನಗಳಲ್ಲಿ ನಾನಾ ರೀತಿಯ ಪಾತ್ರಗಳು ಅರಸಿಕೊಂಡು ಬರುವ ಎಲ್ಲಾ ಲಕ್ಷಣಗಳೂ ಇವೆ. ಕೆಲವು ರಿಸ್ಕಿ ಫೈಟ್ಗಳನ್ನು ಹಾಲಲ್ಲಿ ರಸ್ಕ್’ ಮುಳುಗಿಸಿ ತಿಂದಷ್ಟು ಸಲೀಸಾಗಿ ಮಾಡಿರುವ ರಾಣಾ, ಲವರ್ ಬಾಯ್ ಆಗಿಯೂ ಮೆಚ್ಚುಗೆಯಾಗುತ್ತಾರೆ. ಬೋಲ್ಡ್ ಲುಕ್ನಲ್ಲಿ ಮಿಂಚಿರೋ ರಚಿತಾರಾಮ್ ಆಯ್ಕೆ, ಪ್ರೇಮ್ ಅವರ ಸೂಕ್ತ ನಿರ್ಧಾರ. ತರೆಯ ಮೇಲೆ ಅದ್ಭುತವಾಗಿ ಕಾಣಿಸಿಕೊಳ್ಳುವ ರೀಷ್ಮಾ ನಾಣಯ್ಯ, ಸಂಭಾಷಣೆಯ ವಿಚಾರದಲ್ಲಿ ಇನ್ನಷ್ಟು ಪಳಗಬೇಕಿತ್ತು. ಇನ್ನುಳಿಂದತೆ.. ಸುಚೇಂದ್ರ ಪ್ರಸಾದ್, ಕಾಕ್ರೋಚ್ ಸುಧಿ, ಯಶ್ ಶೆಟ್ಟಿ, ಶಶಿಕುಮಾರ್, ದೀಪಕ್ ಮತ್ತುಮಜಾಭಾರತ’ ಪ್ರತಿಭೆಗಳು ಪ್ರೇಮ್ ಕನಸನ್ನು ನನಸು ಮಾಡುವಲ್ಲಿ ಸಾಥ್ ನೀಡಿದ್ದಾರೆ. ಖಡಕ್ ಲಾಯರ್ ಆಗಿರೋ ಚರಣ್ ರಾಜ್ ಅವರ, ‘ಏಕ್ ಲವ್ ಯಾ’ದ ಪಾತ್ರದಿಂದಾಗಿ ಮುಂದಿನ ದಿನಗಳಲ್ಲಿ ಸಾಕಷ್ಟು ಅವಕಾಶವನ್ನು ಪಡೆದುಕೊಳ್ಳಬಹುದು.

Must Read

spot_img

Deprecated: preg_replace(): Passing null to parameter #3 ($subject) of type array|string is deprecated in /home/u452565381/domains/kannadabeatz.com/public_html/wp-includes/kses.php on line 1745

Deprecated: preg_replace(): Passing null to parameter #3 ($subject) of type array|string is deprecated in /home/u452565381/domains/kannadabeatz.com/public_html/wp-includes/kses.php on line 1745
Share via
Copy link
Powered by Social Snap