HomeNewsಇದು ಖ್ಯಾತ ನಿರ್ದೇಶಕ ದಿನೇಶ್ ಬಾಬು ನಿರ್ದೇಶನದ 50ನೇ ಚಿತ್ರ

ಇದು ಖ್ಯಾತ ನಿರ್ದೇಶಕ ದಿನೇಶ್ ಬಾಬು ನಿರ್ದೇಶನದ 50ನೇ ಚಿತ್ರ

ಶಾನ್ವಿ ಶ್ರೀವಾತ್ಸವ್ ಅಭಿನಯದ “ಕಸ್ತೂರಿ ಮಹಲ್” ಮೇ 13 ರಂದು ಬಿಡುಗಡೆ.

ಕನ್ನಡ ಚಿತ್ರರಂಗಕ್ಕೆ ಸಾಕಷ್ಟು ಸದಭಿರುಚಿಯ ಚಿತ್ರಗಳನ್ನು ನೀಡಿರುವ ದಿನೇಶ್ ಬಾಬು ನಿರ್ದೇಶನದ 50 ನೇ ಚಿತ್ರ “ಕಸ್ತೂರಿ ಮಹಲ್” .

ಬಹುಭಾಷ ನಟಿ ಶಾನ್ವಿ ಶ್ರೀವಾತ್ಸವ್ ನಾಯಕಿಯಾಗಿ ನಟಿಸಿರುವ ಈ ಚಿತ್ರ ಮೇ 13 ರಂದು ಬಿಡುಗಡೆಯಾಗುತ್ತಿದೆ.

ಚಿತ್ರ ಬಿಡುಗಡೆ ದಿನಾಂಕ ತಿಳಿಸಲು ಏರ್ಪಡಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಚಿತ್ರತಂಡದ ಸದಸ್ಯರು ಮಾಧ್ಯಮದ ಜೊತೆಗೆ ಮಾತನಾಡಿದರು.

ಕನ್ನಡದಲ್ಲಿ ಸಾಕಷ್ಟು ಹಾರಾರ್ ಚಿತ್ರಗಳು ಬಂದಿವೆಯಾದರೂ ಇದು ವಿಭಿನ್ನ. ಚಿತ್ರೀಕರಣವಾದ ಕೊಟ್ಟಿಗೆಹಾರದ ಪರಿಸರವಂತೂ ಅದ್ಭುತ. ಉತ್ತಮ ಪಾತ್ರ ನೀಡಿರುವ ದಿನೇಶ್ ಬಾಬು ಅವರ ನಿರ್ದೇಶನದ ಬಗ್ಗೆ ಎಷ್ಟು ಹೇಳಿದರೂ ಕಡಿಮೆ. ಎರಡೂವರೆ ವರ್ಷಗಳ ನಂತರ ನನ್ನ ಅಭಿನಯದ ಚಿತ್ರ ತೆರೆಗೆ ಬರುತ್ತಿದೆ. ನೋಡಿ ಹರಸಿ ಎಂದರು ಶಾನ್ವಿ ಶ್ರೀವಾತ್ಸವ್.

ಮೊದಲಿಗೆ ನಿರ್ದೇಶನದಲ್ಲಿ ಐವತ್ತು ಚಿತ್ರಗಳನ್ನು ಪೂರೈಸಿರುವ ದಿನೇಶ್ ಬಾಬು ಅವರನ್ನು ಅಭಿನಂದಿಸಿತ್ತೇನೆ. ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ಹಾರಾರ್ ಚಿತ್ರಗಳು ಬಂದಿವೆ. ಪ್ರೇಕ್ಷಕರ ಮನ ಗೆದ್ದಿದೆ. ಆದರೆ ಇದು ವಿಭಿನ್ನ. ನನ್ನ ಪಾತ್ರ ಕೂಡ ಚೆನ್ನಾಗಿದೆ ಎಂದರು ರಂಗಾಯಣ ರಘು.

ಇದೊಂದು ಉತ್ತಮ ಚಿತ್ರ. ನನ್ನದು ಒಳ್ಳೆಯ ಪಾತ್ರ. ಕೊಟ್ಟಿಗೆ ಹಾರದ ನಮ್ಮ ಪೂರ್ವಜರ ಮನೆಯಲ್ಲಿ(೨೦೦ ವರ್ಷ ಹಳೆಯದು) ಚಿತ್ರೀಕರಣವಾಗಿದ್ದು ನಿಜಕ್ಕೂ ಸಂತೋಷ. ಅವಕಾಶ ನೀಡಿದ ನಿರ್ದೇಶಕ ಹಾಗೂ ನಿರ್ಮಾಪಕರಿಗೆ ಅಭಿನಂದನೆ ಎಂದರು ನಾಯಕ ಸ್ಕಂದ.

ದಿನೇಶ್ ಬಾಬು ಅವರ ಹತ್ತಿರ ಹಾರಾರ್ ಸಿನಿಮಾ ಮಾಡೋಣ ಅಂತ ಹೇಳಿದ್ದೆ. ಉತ್ತಮ ಕಥೆ ಸಿದ್ದ ಮಾಡಿಕೊಂಡು ಸಿನಿಮಾ ಶುರು ಮಾಡಿದರು. ಇದೇ ಮೇ 13 ಚಿತ್ರ ಬಿಡುಗಡೆಯಾಗುತ್ತಿದೆ. ನಿಮ್ಮ ಪ್ರೋತ್ಸಾಹವಿರಲಿ ಎನ್ನುತ್ತಾರೆ ನಿರ್ಮಾಪಕ ರವೀಶ್.

ಚಿತ್ರದಲ್ಲಿ ಅಭಿನಯಿಸಿರುವ ಶೃತಿ ಪ್ರಕಾಶ್, ವತ್ಸಲಾ ಮೋಹನ್, ಕಾಶಿಮಾ, ನೀನಾಸಂ ಅಶ್ವಥ್ ತಮ್ಮ ಪಾತ್ರದ ಬಗ್ಗೆ ಮಾತನಾಡಿದರು. ಹಿನ್ನೆಲೆ ಸಂಗೀತ ನೀಡಿರುವ ರಮೇಶ್ ಕೃಷ್ಣ ಸಂಗೀತದ ಬಗ್ಗೆ ಮಾಹಿತಿ ನೀಡಿದರು.

Must Read

spot_img

Deprecated: preg_replace(): Passing null to parameter #3 ($subject) of type array|string is deprecated in /home/u452565381/domains/kannadabeatz.com/public_html/wp-includes/kses.php on line 1745

Deprecated: preg_replace(): Passing null to parameter #3 ($subject) of type array|string is deprecated in /home/u452565381/domains/kannadabeatz.com/public_html/wp-includes/kses.php on line 1745
Share via
Copy link
Powered by Social Snap