ಕನ್ನಡ ಚಿತ್ರರಂಗಕ್ಕೆ ಸದಭಿರುಚಿ ಚಿತ್ರಗಳನ್ನು ನೀಡುತ್ತಿರುವ ಹೊಸ ನಿರ್ದೇಶಕರಲ್ಲಿ ಈಶ್ವರ್ ಪೋಲಂಕಿ ಸಹ ಹೊರತಾಗಿಲ್ಲ, ಅವರದ್ದೇ ಆದ ಪೋಲಂಕಿ ಪ್ಯಾಶನ್ ಪಿಕ್ಚರ್ಸ್ ಬ್ಯಾನರ್ ನ ಅಡಿ ಯಲ್ಲಿ ತಾವೇ ನಿರ್ಮಿಸಿ ನಿರ್ದೇಶಿಸಿರುವ ಅರ್ಜುನ ಸನ್ಯಾಸಿ ಸಿನಿಮಾ ಟ್ರೈಲರ್ ಬಿಡುಗಡೆ ಆಗಿದ್ದು ಸದ್ಯ ಅರ್ದ ಮಿಲಿಯಾನ್ ವೀಕ್ಷಣೆ ಕಂಡಿದ್ದು, ಯೌಟ್ಯೂಬಿನಲ್ಲಿ ಟ್ರೆಂಡಿಂಗಲಿದೆ.
ನಿರ್ದೇಶಕ ಈಶ್ವರ್ ಪೋಲಂಕಿ ಅವರಿಗೆ ಗುರುಮೂರ್ತಿ ಹೆಗ್ಡೆ, ಅನುರಂಜನ್ ಹೆಚ್ ಆರ್ ಮತ್ತು ನೇತ್ರ ರಾಜ್ ಭಾರತೀಪುರ ಕೋ-ಪ್ರೊಡ್ಯೂಸರ್ಸ್ ಆಗಿ ಸಾಥ್ ನೀಡಿದು, ತಾರಾಬಳಗದಲ್ಲಿ ನಾಗೇಂದ್ರ ಷಾ, ಅಭಿನಯ, ಕಾಮಿಡಿ ಕಿಲಾಡಿಗಳು ಸೂರಜ್, ವಾಣಿ ಪಾತ್ರಕ್ಕೆ ಜೀವ ತುಂಬಿದ್ದು, ನಾಯಕನಾಗಿ ಸಿ ಸಿ ರಾವ್, ನಾಯಕಿಯಾಗಿ ಸೌಂದರ್ಯ ಗೌಡ ಅಭಿನಯಿಸಿದ್ದಾರೆ.
ಸದ್ಯ ಕನ್ನಡ ಸಿನಿಮಾ ರಂಗದಲ್ಲಿ ಮನರಂಜನೆಯ ಜೊತೆಜೊತೆಗೆ ಕಂಟೆಂಟ್ ಓರಿಎಂಟೆಡ್ ಸಿನಿಮಾಗಳು ಜನರ ಮನಗೆಲ್ಲುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ.
ವಿಭಿನ್ನ ಕಥಾಂದರೊಂದಿಗೆ ನಿಮನ್ನೆಲ್ಲ ಮನರಂಜಿಸಲು ತಯಾರಾಗಿರುವ ಈಶ್ವರ್ ಪೋಲಂಕಿ ಮತ್ತು ತಂಡಕ್ಕೆ ಅಭಿನಂದನೆಗಳು.