HomeNewsಅಬ್ಬರ ಟ್ರೈಲರ್ ಇನ್ನೂ ಅಬ್ಬರ..!

ಅಬ್ಬರ ಟ್ರೈಲರ್ ಇನ್ನೂ ಅಬ್ಬರ..!

೧೮ಕ್ಕೆ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಚಿತ್ರದ ರಿಲೀಸ್‌ಗೂ ಮುನ್ನ ಟ್ರೈಲರ್ ಮೂಲಕ ಸಿನಿಮಾದ ಒಂದಷ್ಟು ಕಂಟೆಂಟ್ ಜನರಿಗೆ ಪರಿಚಯಿಸಲಾಗುತ್ತದೆ. ಹಾಗೇ ಅಬ್ಬರ ಚಿತ್ರದ ಟ್ರಲರ್ ಬಿಡುಗಡೆ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು. ಮುಖ್ಯ ಅತಿಥಿಯಾಗಿದ್ದ ಹಿರಿಯನಟ ದೇವರಾಜ್ ಅವರು ಚಿತ್ರದ
ಟ್ರೈಲರ್ ಅನಾವರಣಗೊಳಿಸಿದರು. ಟೈಸನ್, ಕ್ರ‍್ಯಾಕ್ ನಂತರ ರಾಮ್‌ನಾರಾಯಣ್ ನಿರ್ದೇಶಿಸಿರುವ ಈ ಚಿತ್ರವನ್ನು ಸಿ. ಅಂಡ್ ಎಂ.ಮೂವೀಸ್ ಲಾಂಛನದಲ್ಲಿ ಬಸವರಾಜ್ ಮಂಚಯ್ಯ ಅವರು ನಿರ್ಮಿಸಿದ್ದಾರೆ. ಆ್ಯಕ್ಷನ್,
ಫ್ಯಾಮಿಲಿ, ಕಾಮಿಡಿ ಎಂಟರ್‌ಟೈನರ್ ಕಥಾಹಂದರ ಹೊಂದಿರೋ ಈ ಚಿತ್ರದಲ್ಲಿ ಪ್ರಜ್ವಲ್ ಜೊತೆ ರಾಶಿಪೊನ್ನಪ್ಪ, ನಿಮಿಕಾ ರತ್ನಾಕರ್ ಹಾಗೂ ಲೇಖಾಚಂದ್ರ ನಾಯಕಿಯರಾಗಿ ಅಭಿನಯಿಸಿದ್ದಾರೆ.


ಪಿಆರ್‌ಓ ನಾಗೇಂದ್ರ ಅವರು ಚಿತ್ರತಂಡಕ್ಕೆ ಶುಭಾಶಯ ಕೋರುವುದರೊಂದಿಗೆ ಪ್ರಾರಂಭವಾದ ಕಾರ್ಯಕ್ರಮದಲ್ಲಿ ಟ್ರೈಲರ್ ಹಾಗೂ ಹಾಡುಗಳನ್ನು ಪ್ರದರ್ಶಿಸಲಾಯಿತು. ನಂತರ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ನಿರ್ದೇಶಕ ರಾಮ್‌ನಾರಾಯಣ್, ಇದೇ ತಿಂಗಳ ೧೮ಕ್ಕೆ ಅಬ್ಬರ ಬಿಡುಗಡೆಯಾಗ್ತಿದೆ. ಎಕ್ಸೈಟ್‌ಮೆಂಟ್ ಜೊತೆಗೆ ಆತಂಕವೂ ಇದೆ. ಈ ಸೀನ್‌ಗೆ, ಈ ಫೈಟ್‌ಗೆ, ಈ ಹಾಡಿಗೆ ಜನ ಏನೆನ್ನಬಹುದು ಎಂಬ ಕುತೂಹಲವಿದೆ. ಆದರೆ ಸಿನಿಮಾ ಗೆದ್ದೇಗೆಲ್ಲುತ್ತೆ ಎಂಬ ಭರವಸೆಯಿದೆ. ಅಬ್ಬರ ಡೇ ಒನ್‌ನಿಂದ ಅಬ್ಬರವಾಗೇ ಬರ‍್ತಿದೆ. ಆರಂಭದಲ್ಲಿ ಟೈಟಲ್‌ನ್ನು ಎಸ್.ಗೋವಿಂದ್ ಅವರು ನಮಗೆ ಬಿಟ್ಟುಕೊಟ್ಟರು.


ಪ್ರತಿ ಹಂತದಲ್ಲೂ ಅಂದುಕೊಂಡದ್ದಕ್ಕಿಂತ ಚೆನ್ನಾಗಿಯೇ ಚಿತ್ರ ಬಂದಿದೆ. ಹಾಡಿನ ಸಮಯದಲ್ಲಿ ನಿಮಿಕಾಗೆ ಕಾಲು
ಪೆಟ್ಟಾಗಿದ್ದರೂ ತೋರಿಸಿಕೊಳ್ಳದೆ ಅಭಿನಯಿಸಿದರು. ಚಿತ್ರದ ಟೈಟಲನ್ನು ಶಿವರಾಜ್‌ಕುಮಾರ್ ರಿಲೀಸ್ ಮಾಡಿದ್ದರು.
ಈಗ ಟ್ರೈಲರನ್ನು ದೇವರಾಜ್ ರಿಲೀಸ್ ಮಾಡಿದ್ದಾರೆ. ನಿರ್ಮಾಪಕರ ಹೆಸರೂ ಬಸವರಾಜ್, ಹೀಗೆ ನಮ್ಮ ಸಿನಿಮಾಗೆ ರಾಜ್ ಎನ್ನುವ ಹೆಸರು ಶಕ್ತಿಯಾಗಿ ನಿಂತಿದೆ. ರವಿಶಂಕರ್ ಅತ್ಯದ್ಭುತವಾಗಿ ಅಭಿನಯಿಸಿದ್ದಾರೆ, ಅವರಿಗೆ ೨ ಶೇಡ್ಸ್ ಇದೆ. ಶೋಭರಾಜ್, ಶಂಕರ್ ಅಶ್ವಥ್, ವಿಕ್ಟರಿವಾಸು, ಕೋಟೆ ಪ್ರಭಾಕರ್ ತುಂಬಾ ಚೆನ್ನಾಗಿ ಆಕ್ಟ್
ಮಾಡಿದ್ದಾರೆ. ಅಲ್ಲದೆ ರವಿ ಬಸ್ರೂರು ಒಳ್ಳೆಯ ಹಾಡುಗಳನ್ನು ಮಾಡಿಕೊಟ್ಟಿದ್ದಾರೆ. ಜೆ.ಕೆ.ಗಣೇಶ್ ಕ್ಯಾಮೆರಾವರ್ಕ್ ನಿಭಾಯಿಸಿದ್ದು, ಮೂವರು ನಾಯಕಿಯರೂ ಪೈಪೋಟಿಗೆ ಬಿದ್ದವರಂತೆ ಅಭಿನಯಿಸಿದ್ದಾರೆ
ಎಂದರು.
ನಿರ್ಮಾಪಕ ಬಸವರಾಜ್ ಮಂಚಯ್ಯ ಮಾತನಾಡುತ್ತ ಕೋವಿಡ್ ಆಗತಾನೇ ಮುಗಿದಿತ್ತು. ಹಾಡುಗಳನ್ನು ಫಾರಿನ್‌ನಲ್ಲಿ ಶೂಟ್ ಮಾಡಲು ಪ್ರಜ್ವಲ್ ಒಪ್ಪಿದರು. ೨ ಹಾಡುಗಳನ್ನು ಥೈಲ್ಯಾಂಡ್‌ನಲ್ಲೇ
ಶೂಟ್ ಮಾಡಿದ್ದೇವೆ. ತೆರೆಯ ಹಿಂದೆ ನಾವಿದ್ದರೂ, ತೆರೆಯಮುಂದೆ ಅವರೆಲ್ಲ ಪಟ್ಟಿರುವ ಶ್ರಮವನ್ನು ಜನರೆಲ್ಲ ನೋಡುತ್ತಾರೆ. ತಂದೆ ಒಂದು ಒಂದು ತಪ್ಪು ಮಾಡ್ತಾನೆ, ಅದನ್ನು ಸರಿಪಡಿಸುವುಕ್ಕೆ ಹೋಗಿ ಮತ್ತೊಂದು ತಪ್ಪು ಮಾಡ್ತಾನೆ. ನಂತರ ಮಗ ಅದನ್ನು ಹೇಗೆ ಸರಿಪಡಿಸ್ತಾನೆ ಅನ್ನೋದೇ ಈ ಚಿತ್ರದ
ಕಥೆ. ಹಾಗಾಗಿ ನಾಯಕನ ತಂದೆ ದೇವರಾಜ್ ಅವರ ಕೈಲೇ ಟ್ರೈಲರ್ ಲಾಂಚ್ ಮಾಡಿಸಿದ್ದೇವೆ. ಪಿಆರ್‌ಓ ನಾಗೇಂದ್ರ ಅವರು ಈಥರ ಮಾಡಿ ಎಂದು ಸಲಹೆ ಕೊಟ್ಟರು ಎಂದು ಹೇಳಿದರು.
ನಂತರ ದೇವರಾಜ್ ಮಾತನಾಡಿ ಟ್ರೈಲರ್ ಹಾಡುಗಳು ತುಂಬಾ ಚೆನ್ನಾಗಿ ಬಂದಿವೆ. ಚಿತ್ರದ ಮೂವರು ನಾಯಕಿಯರು ಮಗನ ಬಗ್ಗೆ ಒಳ್ಳೆಯ ಮಾತುಗಳನ್ನು ಹೇಳಿದಾಗ ಒಬ್ಬ ತಂದೆಯಾಗಿ ನನಗೆ ತುಂಬಾ ಖುಷಿಯಾಯ್ತು. ಕನ್ನಡ ಚಿತ್ರರಂಗಕ್ಕೀಗ ಶುಕ್ರದೆಸೆ ಬಂದಿದೆ. ಇಡೀ ದೇಶ ಹೊಗಳುತ್ತಿದೆ. ರಾಮ ನಾರಾಯಣ್ ಜೊತೆ ನಾನೂ ಕೆಲಸ ಮಾಡಿದ್ದೇನೆ. ಒಬ್ಬ ಸಾಹಿತಿಯ ಕೈಲಿ ಬಂದಿರುವ ಡೈಲಾಗ್‌ಗಳು ತುಂಬಾ ಚೆನ್ನಾಗಿರುತ್ತೆ. ಅವರು ಆಡೋ ಮಾತಲ್ಲಿ ನಾಟಕೀಯತೆ ಕಾಣಲಿಲ್ಲ ಎಂದು ಹೇಳಿದರು, ನಾಯಕ ಪ್ರಜ್ವಲ್ ಮಾತಾಡುತ್ತ ಚಿತ್ರದ ರಿಲೀಸ್ ಹತ್ತಿರವಾಗ್ತಿದ್ದಂತೆ ಎಕ್ಸೈಟ್‌ಮೆಂಟ್ ಇರುತ್ತೆ, ಆದರೆ ಈ ಸಿನಿಮಾ ಮಾಡಿದಮೇಲೆ
ನೆಮ್ಮದಿ ಕಾಣಿಸ್ತಿದೆ. ಚಿತ್ರ ಇಷ್ಟು ಚೆನ್ನಾಗಿ ಬರಲು ಇಡೀತಂಡ ಹಾಕಿದ ಎಫರ್ಟ್ ಕಾರಣ. ಚಿತ್ರದಲ್ಲಿ ನನಗೆ ಮೂರು ವಿಭಿನ್ನವಾದ ಪಾತ್ರಗಳಿದ್ದು, ೫ ರೀತಿಯಲ್ಲಿ ಕಾಣಿಸಿಕೊಳ್ಳುತ್ತೇನೆ. ಒಂದೇದಿನ ಮೂರೂ
ಪಾತ್ರಗಳನ್ನು ಮಾಡಬೇಕಾಗಿತ್ತು. ಕಾಮಿಡಿ, ಎಂಟರ್‌ಟೈನಿಂಗ್ ಜೊತೆಗೆ ಒಂದು ರಿವೆಂಜ್ ಥಾಟ್ ಚಿತ್ರದಲ್ಲಿದೆ.
ಅದು ಚಿತ್ರದ ಕೊನೇವರೆಗೂ ಪ್ರೇಕ್ಷಕರಲ್ಲಿ ಕುತೂಹಲ ಕೆರಳಿಸುತ್ತಲೇ ಇರುತ್ತದೆ. ನಾನು
ನಡೆಯುವ ದಾರಿ ಹೀಗೇ ಇರಬೇಕು ಅಂದುಕೊಂಡಿರುತ್ತೇವೆ. ಆದರೆ, ಅದು ಹೋಗ್ತಾ ಹೋಗ್ತಾ ಕಳೆದುಹೋಗುತ್ತದೆ. ಮನುಷ್ಯ ಯಾವಾಗಲೂ ಜಾಗೃತನಾಗಿರಬೇಕು ಎನ್ನುವುದೇ ಚಿತ್ರದ ಸಂದೇಶ ಎಂದು ಹೇಳಿದರು. ನಾಯಕಿಯರಾದ ನಿಮಿಕಾ ರತ್ನಾಕರ್, ಲೇಖಾಚಂದ್ರ ಹಾಗೂ ರಾಜಶ್ರೀ
ಪೊನ್ನಪ್ಪ ಇವರೆಲ್ಲರೂ ಚಿತ್ರೀಕರಣದ ಅನುಭವಗಳು ಹಾಗೂ ತಮ್ಮ ಪಾತ್ರಗಳ ಬಗ್ಗೆ
ಹೇಳಿಕೊಂಡರು.

Must Read

spot_img

Deprecated: preg_replace(): Passing null to parameter #3 ($subject) of type array|string is deprecated in /home/u452565381/domains/kannadabeatz.com/public_html/wp-includes/kses.php on line 1805

Deprecated: preg_replace(): Passing null to parameter #3 ($subject) of type array|string is deprecated in /home/u452565381/domains/kannadabeatz.com/public_html/wp-includes/kses.php on line 1805
Share via
Copy link
Powered by Social Snap